ನವದೆಹಲಿ: ಸ್ವಯಂಘೋಷಿತ ಗೋರಕ್ಷಕ ತಂಡವೊಂದು 12ನೇ ತರಗತಿ ವಿದ್ಯಾರ್ಥಿಯನ್ನು ದನ ಕಳ್ಳಸಾಗಣೆದಾರನೆಂದು ತಿಳಿದು ಗುಂಡಿಕ್ಕಿ ಹತ್ಯೆ ಮಾಡಿರುವ ಪ್ರಕರಣವು ದ್ವೇಷದ ಕಾರ್ಯಸೂಚಿಗೆ ಪ್ರಚೋದನೆ ನೀಡಿರುವುದರ ಪ್ರತಿಫಲ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಬುಧವಾರ ಹೇಳಿದರು.
ಇದೇ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಈ ಬಗ್ಗೆ ಮಾತನಾಡುವರೇ ಎಂದು ಅವರು ಪ್ರಶ್ನಿಸಿದರು.
ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಸಿಬಲ್ ಅವರು, ‘ನಮಗೆ ನಾಚಿಕೆಯಾಗಬೇಕು’ ಎಂದು ಹೇಳಿದ್ದಾರೆ.
Shame on Us
Aryan 𝐌𝐢𝐬𝐡𝐫𝐚 (class 12th student)
Shot and killed by cow vigilantes in Haryana mistaking him to be a “cow transporter” !
ಆಗಸ್ಟ್ 23ರಂದು ಗುಂಪೊಂದು ವಿದ್ಯಾರ್ಥಿ ಆರ್ಯನ್ ಮಿಶ್ರಾ ಅವರ ಕಾರನ್ನು ಹಿಂಬಾಲಿಸಿ ಫರೀದಾಬಾದ್ ಬಳಿ ಗುಂಡಿಕ್ಕಿ ಹತ್ಯೆಗೈದಿತ್ತು. ಹತ್ಯೆಗೆ ಸಂಬಂಧಿಸಿದಂತೆ ಸೌರಭ್, ಅನಿಲ್ ಕೌಶಿಕ್, ವರುಣ್, ಕೃಷ್ಣ ಮತ್ತು ಆದೇಶ್ ಎಂಬ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಂಗಳವಾರ ತಿಳಿಸಿವೆ