ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಿಸಿ ಕೋಟಾ ಇಲ್ಲದ ಮಹಿಳಾ ಮೀಸಲು ಮಸೂದೆ ಅಪೂರ್ಣ: ರಾಹುಲ್‌ ಗಾಂಧಿ

Published 20 ಸೆಪ್ಟೆಂಬರ್ 2023, 14:22 IST
Last Updated 20 ಸೆಪ್ಟೆಂಬರ್ 2023, 14:22 IST
ಅಕ್ಷರ ಗಾತ್ರ

ನವದೆಹಲಿ: ‘ಮಹಿಳಾ ಮೀಸಲು ಮಸೂದೆಯನ್ನು ಸ್ವಾಗತಿಸುತ್ತೇನೆ. ಆದರೆ ಇತರ ಹಿಂದುಳಿದ ವರ್ಗಗಳಿಗೆ ಇದರಲ್ಲಿ ಮೀಸಲಾತಿ ಇಲ್ಲದಿರುವುದರಿಂದ ಇದು ಅಪೂರ್ಣವಾಗಿದೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬುಧವಾರ ಅಭಿಪ್ರಾಯ ಪಟ್ಟರು.

ಲೋಕಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡ ಅವರು, ಹಳೆ ಸಂಸತ್‌ ಭವನದಿಂದ ಹೊಸ ಸಂಸತ್‌ ಕಟ್ಟಡಕ್ಕೆ ಕಾರ್ಯಭಾರವನ್ನು ವರ್ಗಾಯಿಸಿದ ಸಂದರ್ಭದಲ್ಲಿ ರಾಷ್ಟ್ರಪತಿ ಅವರಿಗೆ ಆಹ್ವಾನ ನೀಡಬೇಕಿತ್ತು ಎಂದರು.

ಮಹಿಳೆಯರಿಗೆ ಅಧಿಕಾರ ವರ್ಗಾವಣೆಯಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯು ಭಾರಿ ದೊಡ್ಡ ಹೆಜ್ಜೆ. ಈಗಿನ ಮಸೂದೆ ಈ ದಿಸೆಯಲ್ಲಿ ಮತ್ತೊಂದು ಬೃಹತ್‌ ಹೆಜ್ಜೆ ಎಂದು ಹೇಳಿದರು.

‘ಮೋದಿ ಸರ್ಕಾರ ಜನಗಣತಿ ನಡೆಸಬೇಕು. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆಸಿದ್ದ ಜನಗಣತಿಯ ದತ್ತಾಂಶವನ್ನು ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ನಾವೇ ಇದನ್ನು ಬಿಡುಗಡೆ ಮಾಡುತ್ತೇವೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT