ಪಂಜಾಬ್, ಹಿಮಾಚಲ ಪ್ರದೇಶ ಮತ್ತು ಜಮ್ಮುವಿನಲ್ಲಿ ಮಳೆ ಮುಂದುವರಿದಿದೆ. ಪಂಜಾಬ್‌ನಲ್ಲಿ ಸತಲುಜ್ ನದಿಗೆ ಕಟ್ಟಲಾಗಿರುವ ಬಾಕ್ರಾ ಅಣೆಕಟ್ಟು ತುಂಬಲು ಕೆಲವೇ ಅಡಿಗಳಿವೆ. ಬಿಯಾಸ್ ನದಿಗೆ ಕಟ್ಟಲಾಗಿರುವ ಪೊಂಗ್ ಅಣೆಕಟ್ಟಿನಲ್ಲಿ ಗರಿಷ್ಠ ಸಾಮರ್ಥ್ಯ ಮೀರಿ ನೀರು ತುಂಬಿದೆ. ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಈ ನದಿಗಳಿಗೆ ಅಂಟಿಕೊಂಡಿರುವ ಗ್ರಾಮಗಳು, ತಗ್ಗು ಪ್ರದೇಶಗಳ ಜನರಿಗೆ ಆಡಳಿತ ಸೂಚಿಸಿದೆ. ಇನ್ನೊಂದೆಡೆ, ದೆಹಲಿಯಲ್ಲಿ ಯಮುನಾ ನದಿ ಉಕ್ಕಿ ಹರಿಯುತ್ತಿದ್ದು, ನಿರಾಶ್ರಿತ ಶಿಬಿರಗಳಿಗೂ ನೀರು ನುಗ್ಗಿದ್ದು ಜನರು ಪರದಾಡುವಂತಾಗಿದೆ. ಹಿಮಾಚಲ ಪ್ರದೇಶದಲ್ಲಿ ಭೂಕುಸಿತ ಮುಂದುವರಿದಿದೆ. ಈ ಎಲ್ಲ ಕಡೆಗಳಲ್ಲಿಯೂ ರಕ್ಷಣಾ ಕಾರ್ಯ, ಪರಿಹಾರ ಕಾರ್ಯವನ್ನು ಮುಂದುವರಿಸಲಾಗಿದೆ. ‘ಮುಂದಿನ 3–4 ದಿನಗಳಲ್ಲಿ ಗುಜರಾತ್, ಮಧ್ಯ ಪ್ರದೇಶ ಮತ್ತು ರಾಜಸ್ಥಾನದ ಕೆಲ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ’ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಯಮುನಾ ನದಿಯ ನೀರಿನ ಮಟ್ಟ ಏರಿಕೆಯಾಗಿರುವ ಕಾರಣ ದೆಹಲಿಯಲ್ಲಿ ಪ್ರವಾಹ ಉಂಟಾಗಿದ್ದು ನೀರು ತುಂಬಿದ ರಸ್ತೆಗಳಲ್ಲಿ ಜನರು ನಡೆದರು –ಎಎಫ್‌ಪಿ ಚಿತ್ರ
ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯಲ್ಲಿ ಮನೆಯೊಂದು ಕುಸಿದಿದೆ – ಪಿಟಿಐ ಚಿತ್ರ