ತಿರುಪತಿ (ಪಿಟಿಐ): ಸಿಬಿಐ ವಶದಲ್ಲಿರುವ ಕರ್ನಾಟಕದ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು 2 ವರ್ಷಗಳ ಹಿಂದೆ ತಿರುಪತಿ ವೆಂಕಟೇಶ್ವರನಿಗೆ ಕಾಣಿಕೆ ನೀಡಿರುವ 45 ಕೋಟಿ ಮೌಲ್ಯದ ವಜ್ರ ಖಚಿತ ಚಿನ್ನದ ಕಿರೀಟವನ್ನು ಹಿಂದಿರುಗಿಸುವುದಿಲ್ಲ ಎಂದು ದೇವಾಲಯದ ಟ್ರಸ್ಟ್ ಶನಿವಾರ ಹೇಳಿದೆ.

ಕೆಲವು ಭಕ್ತರು ಹಾಗೂ ರಾಜಕೀಯ ಪಕ್ಷಗಳು `ಕಳಂಕಿತ~ ರೆಡ್ಡಿ ನೀಡಿರುವ ಕಿರೀಟವನ್ನು ವಾಪಸ್ ನೀಡುವಂತೆ ಮನವಿ ಮಾಡಿರುವ ಹಿನ್ನೆಲೆಯಲ್ಲಿ ದೇವಾಲಯದ ನಿರ್ವಹಣೆ ಮಾಡುತ್ತಿರುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ವಿ ಸುಬ್ರಹ್ಮಣ್ಯಂ ಅವರು ಶನಿವಾರ ಹೇಳಿಕೆ ನೀಡಿದ್ದು, `ಭಕ್ತರು ನೀಡಿದ ಯಾವುದೇ ಕಾಣಿಕೆಯನ್ನು ಯಾವುದೇ ಪರಿಸ್ಥಿತಿಯಲ್ಲಿ ವಾಪಸ್ ನೀಡುವುದಿಲ್ಲ. ಜನಾರ್ದನ ರೆಡ್ಡಿ ವಿಷಯದಲ್ಲೂ ಇದೇ ಅನ್ವಯವಾಗುತ್ತದೆ~ ಎಂದು ಸ್ಪಷ್ಟಪಡಿಸಿದ್ದಾರೆ.

ರೆಡ್ಡಿ ಅವರು 2009ರ ಜೂನ್ 11ರಂದು 2.5 ಅಡಿ ಎತ್ತರದ ಒಟ್ಟು 30 ಕೆ.ಜಿ ತೂಕದ ಕಿರೀಟವನ್ನು ವೆಂಕಟೇಶ್ವರನಿಗೆ ಅರ್ಪಿಸಿದ್ದರು.

ಅಕ್ರಮ ಗಣಿಕಾರಿಕೆ ನಡೆಸಿದ ಆರೋಪದಲ್ಲಿ ಜನಾರ್ದನ ರೆಡ್ಡಿ ಅವರನ್ನು ಸಿಬಿಐ ಸೆಪ್ಟೆಂಬರ್ 5ರಂದು ಬಂಧಿಸಿತ್ತು. ಈಗ ಅವರು ಹೈದರಾಬಾದ್ನ ಜೈಲಿನಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.