ಭಾರತದಲ್ಲಿ ವಿವಿಧ ಕ್ಷೇತ್ರಗಳಲ್ಲಿರುವ ಲಿಂಗ ತಾರತಮ್ಯ ವೇತನದಲ್ಲೂ ಇದೆ. ಪುರುಷರಿಗೆ ಹೋಲಿಸಿದರೆ ದೇಶದ ಉದ್ಯಮ ಕ್ಷೇತ್ರದಲ್ಲಿ ಉದ್ಯೋಗದಲ್ಲಿರುವ ಮಹಿಳೆಯರು ಶೇ 25ರಷ್ಟು ಕಡಿಮೆ ವೇತನ ಪಡೆಯುತ್ತಿದ್ದಾರೆ.

ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ನೀಡುವ ಆನ್‌ಲೈನ್ ಕಂಪೆನಿ ‘ಮಾನ್‌ಸ್ಟರ್’ ನಡೆಸಿರುವ ಸಮೀಕ್ಷೆಯಲ್ಲಿ ಈ ಮಾಹಿತಿ ತಿಳಿದು ಬಂದಿದೆ.
‘ಭಾರತದ ಉದ್ಯಮಗಳಲ್ಲಿ ಮಹಿಳೆಯರು’ ಎಂಬ ಶೀರ್ಷಿಕೆ ಅಡಿಯಲ್ಲಿ ಕಂಪೆನಿ ಸಮೀಕ್ಷೆ ನಡೆಸಿದೆ.

ಸಂಗ್ರಹಿಸಿರುವ ದತ್ತಾಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿ, ಪುರುಷ ಮತ್ತು ಮಹಿಳಾ ಉದ್ಯೋಗಿಗಳ ವೇತನಗಳನ್ನು ಪರಸ್ಪರ ಹೋಲಿಸಿ
‘ಮಾನ್‌ಸ್ಟರ್ ವೇತನ ಸೂಚಿ’ಯನ್ನು ಬಿಡುಗಡೆ ಮಾಡಿದೆ.

‘ನಮಗಿಲ್ಲ, ಅವರಿಗೇ ಎಲ್ಲ’
* ತಮ್ಮ ಪುರುಷ ಸಹೋದ್ಯೋಗಿಗಳಿಗೆ ಬಡ್ತಿ ಅವಕಾಶಗಳು ಹೆಚ್ಚು ಎಂದು ಶೇ 62.4ರಷ್ಟು ಮಹಿಳಾ ಉದ್ಯೋಗಿಗಳು ಅಭಿಪ್ರಾಯಪಟ್ಟಿದ್ದಾರೆ

* ಭಾರತದ ಉದ್ಯಮದಲ್ಲಿ ಲಿಂಗ ತಾರತಮ್ಯ ಈಗಲೂ ಇದೆ. ಇದನ್ನು ಹೋಗಲಾಡಿಸಲು ಕಂಪೆನಿಯ ಆಡಳಿತ ಮಂಡಳಿಗಳು ಕ್ರಮ ಕೈಗೊಳ್ಳುವ ಅಗತ್ಯವಿದೆ. ಇದಕ್ಕಾಗಿ ಹೊಸ ನೀತಿಗಳನ್ನು ಜಾರಿಗೆ ತರಬೇಕು ಎಂದು ಶೇ 68.5ರಷ್ಟು ಮಹಿಳೆಯರು ಪ್ರತಿಪಾದಿಸಿದ್ದಾರೆ.

ಸಮೀಕ್ಷೆಗಾಗಿ ಸಂಪರ್ಕಿಸಲಾದ ಮಹಿಳಾ ಉದ್ಯೋಗಿಗಳ ಸಂಖ್ಯೆ 2ಸಾವಿರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.