ಚಂಡೀಗಡ (ಪಿಟಿಐ): ಸ್ವಯಂಘೋಷಿತ ದೇವಮಾನವ ರಾಮ್‌ಪಾಲ್ ಅವರನ್ನು ಬಂಧಿಸಲು ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಮತ್ತು ನಂತರ ಅವರಿಗೆ ಒದಗಿಸಲಾದ ಭದ್ರತೆಗೆ 26 ಕೋಟಿ ಖರ್ಚಾಗಿದೆ.

ಹರಿಯಾಣದ ಪೊಲೀಸ್ ಮಹಾನಿರ್ದೇಶಕ ಎಸ್.ಎನ್ ವಶಿಷ್ಠ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.

ರಾಮ್‌ಪಾಲ್ ಮತ್ತು ಅವರ ಇಬ್ಬರು ಸಹಚರರನ್ನು ಶುಕ್ರವಾರ ಬಿಗಿ ಭದ್ರತೆಯಲ್ಲಿ ಹರಿಯಾಣ ಹೈಕೋರ್ಟ್‌ಗೆ ಹಾಜರುಪಡಿಸಲಾಯಿತು. ನ್ಯಾಯಮೂರ್ತಿ ಎಂ. ಜಯಪಾಲ್ ಮತ್ತು ದರ್ಶನ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 23ಕ್ಕೆ ಮುಂದೂಡಿತು.

ಹಿಸ್ಸಾರ್‌ನಲ್ಲಿರುವ ‘ಸತ್‌ಲೋಕ್’ ಆಶ್ರಮದಲ್ಲಿ ರಾಮ್‌ಪಾಲ್ ತಲೆಮರೆಸಿಕೊಂಡಿದ್ದರು. ಪೊಲೀಸರು ಮತ್ತು ಅರೆಸೇನಾ ಪಡೆ ಸಿಬ್ಬಂದಿ ಎರಡು ದಿನ ಸತತ ಅಹೋರಾತ್ರಿ ಕಾರ್ಯಾಚರಣೆ ನಡೆಸಿ ಅವರನ್ನು (ನವೆಂಬರ್ 19) ಬಂಧಿಸಿದ್ದರು.

ಎಸ್.ಎನ್ ವಶಿಷ್ಠ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ರಾಮ್‌ಪಾಲ್ ಬಂಧನಕ್ಕೆ ಹರಿಯಾಣ ಸರ್ಕಾರ ರೂ 15.43 ಕೋಟಿ, ಪಂಜಾಬ್ ರೂ 4.34 ಕೋಟಿ, ಚಂಡೀಗಡ ಆಡಳಿತ ರೂ 3.29 ಕೋಟಿ ಮತ್ತು ಕೇಂದ್ರ ಸರ್ಕಾರ 3.55 ಕೋಟಿ ಖರ್ಚು ಮಾಡಿದೆ. ಒಟ್ಟಾರೆ ಈ ಕಾರ್ಯಾಚರಣೆಗೆ 26.61 ಕೋಟಿ ಖರ್ಚಾಗಿದೆ ಎಂದು ವಿವರ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.