ನವದೆಹಲಿ (ಐಎಎನ್ಎಸ್): ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರನ್ನು ಹಿಂದಿಕ್ಕಿ ಅತಿ ಹೆಚ್ಚು ಸ್ಫೂರ್ತಿದಾಯಕ ತಾಯಿ ಎಂಬ ಹೆಗ್ಗಳಿಕೆಗೆ ಒಲಿಪಿಂಕ್ ಪದಕ ವಿಜೇತೆ ಬಾಕ್ಸರ್ ಮೇರಿ ಕೋಮ್ ಪಾತ್ರರಾಗಿದ್ದಾರೆ.

ತಾಯಿಯರ ದಿನದ ಅಂಗವಾಗಿ ಬ್ರಿಟನ್ ಮತ್ತು ಭಾರತದಲ್ಲಿ ಅತಿ ಹೆಚ್ಚು ಪ್ರೇರಣೆ ನೀಡಿದ ತಾಯಿ ಯಾರು ಎಂಬ ಬಗ್ಗೆ ತಿಳಿಯುವ ನಿಟ್ಟಿನಲ್ಲಿ ಆನ್ಲೈನ್ ವಧುವರಾನ್ವೇಷಣಾ ವೇದಿಕೆಯಾದ ಶಾದಿ.ಕಾಮ್ ಪ್ರಪಂಚದ ಎಲ್ಲಾ ಭಾಗಗಳಲ್ಲೂ ಆನ್ಲೈನ್ ಮೂಲಕ ಈ ಸಮೀಕ್ಷೆ ಕೈಗೊಂಡಿತ್ತು.

ಭಾರತದಲ್ಲಿ ಸುಮಾರು 9,700 ಮಹಿಳೆಯರು ಇದಕ್ಕೆ ಪ್ರತಿಕ್ರಿಯಿಸಿ ಮತ ಚಲಾಯಿಸಿದ್ದಾರೆ. ಶೇ 39.1 ರಷ್ಟು ಮಂದಿ ಮೇರಿ ಕೋಮ್ಗೆ ಅಭಿಮತ ಸೂಚಿಸಿದ್ದರೆ, ಶೇ 32.4 ರಷ್ಟು ಮಂದಿ ಐಶ್ವರ್ಯಾ ರೈಗೆ ಮತ ಹಾಕಿದ್ದಾರೆ. ಕೇವಲ ಶೇ 28.5 ರಷ್ಟು ಜನರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪರವಿದ್ದಾರೆ.

ಬ್ರಿಟನ್ನಲ್ಲಿ ಅತಿ ಹೆಚ್ಚು ಸ್ಫೂರ್ತಿದಾಯಕ ಅಮ್ಮ ಯಾರು ಎಂಬ ಪ್ರಶ್ನೆಗೆ, ಅಪಘಾತದಲ್ಲಿ ಮೃತಪಟ್ಟ ಯುವರಾಣಿ ಡಯಾನಾ ಅವರಿಗೆ ಶೇ 40.2, ಹ್ಯಾರಿ ಪಾಟರ್ ಕರ್ತೃ ಜೆ.ಕೆ. ರೌಲಿಂಗ್ಗೆ ಶೇ 33 ಮತ ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.