ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

10 ಸಾವಿರ ಮರಗಳ ಸರದಾರ ರಾಯಚೂರಿನ ಈ ಈರಣ್ಣ

Published 25 ಮೇ 2024, 11:36 IST
Last Updated 25 ಮೇ 2024, 11:36 IST
ಅಕ್ಷರ ಗಾತ್ರ

ರಾಯಚೂರು ಎಂಬ ಉರಿಬಿಸಿಲ ಊರನ್ನು ಮಲೆನಾಡನ್ನಾಗಿಸುವ ಕನಸು ಈ ಈರಣ್ಣ ಕೋಸಗಿ ಅವರದ್ದು. ರಾಯಚೂರಿನ ನೇತಾಜಿ ನಗರದಲ್ಲಿರುವ ಇವರು, ಪ್ರತಿ ದಿನ ಎರಡು ತಾಸುಗಳನ್ನು ನಗರವನ್ನು ಹಸಿರನ್ನಾಗಿಸಲು ಮೀಸಲಿಡುತ್ತಾರೆ. ತಮ್ಮ ಮನೆಯ ಹಿಂದೆಯೇ ನರ್ಸರಿ ಮಾಡಿಕೊಂಡಿರುವ ಈರಣ್ಣ, ಅದರ ಸಸಿಗಳನ್ನು ರಾಯಚೂರಿನ ವಿವಿಧೆಡೆ ನೆಟ್ಟು ಬರುತ್ತಾರೆ. ಯಾವುದೇ ಪ್ರಚಾರ, ಫಲಾಪೇಕ್ಷೆಯಿಲ್ಲದೆ 2006ರಿಂದ ಈ ಕಾಯಕದಲ್ಲಿ ನಿರತರಾಗಿರುವ ಈರಣ್ಣ, ಈವರೆಗೆ ನೆಟ್ಟಿರುವ ಸಸಿ, ಬೆಳೆಸಿರುವ ಮರಗಳ ಸಂಖ್ಯೆ 10 ಸಾವಿರಕ್ಕೂ ಹೆಚ್ಚು ! ಆರ್ಥಿಕವಾಗಿ ಬಡತನದಲ್ಲಿರುವ ಈ ಈರಣ್ಣ, ಪರಿಸರದ ವಿಷಯದಲ್ಲಿ ಮತ್ತು ಸ್ವಭಾವದಲ್ಲಿ ಹೃದಯ ಶ್ರೀಮಂತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT