ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ಸಿಎಂ ನಿರ್ಗಮನದ ಬಳಿಕ ಗೇಟ್ ಅಳವಡಿಕೆಯ ಪ್ರಯೋಗ ಆರಂಭ
Published : 13 ಆಗಸ್ಟ್ 2024, 9:22 IST
Last Updated : 13 ಆಗಸ್ಟ್ 2024, 9:22 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ತುಂಗಭದ್ರಾ ಅಣೆಕಟ್ಟೆಯ ಕೊಚ್ಚಿಹೋದ 19ನೇ ಗೇಟ್ ಇದ್ದ ಸ್ಥಳವನ್ನು ವೀಕ್ಷಿಸಿದ್ದು, ಅವರು ನಿರ್ಗಮಿಸಿದ ಬಳಿಕ ಗೇಟ್ ಅಳವಡಿಕೆಯ ಪ್ರಯತ್ನ ಆರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಿಎಂ ಅವರು 1.30 ರ ಸುಮಾರಿಗೆ ಅಣೆಕಟ್ಟು ವೀಕ್ಷಣೆಗೆ ಬಂದಿದ್ದು, ಸುಮಾರು 20 ನಿಮಿಷಗಳ ಕಾಲ ಗೇಟ್ ಕೊಚ್ಚಿಹೋದ ಸ್ಥಳ ಪರಿಶೀಲಿಸಿದರು.

ಅಣೆಕಟ್ಟೆಯ ಬಲದಂಡೆಯಲ್ಲಿ ಗುಡ್ಡದ ಮೇಲೆ ವೈಕುಂಠ ಅತಿಥಿಗೃಹವಿದ್ದು, ಆ ಭಾಗದಲ್ಲಿ ಸಾರ್ವಜನಿಕರ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಿ ಸಿಎಂ, ಇತರ ಸಚಿವರು, ಶಾಸಕರ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಅದೇ ಸ್ಥಳದಲ್ಲಿ ಇದೀಗ ಕ್ರೇನ್ ಮೂಲಕ ಒಂದು ಗೇಟಿನ ಭಾಗ ತರಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT