ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಗುತ್ತಿಗೆದಾರ ಆತ್ಮಹತ್ಯೆಗೆ ಯತ್ನ

ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ
Published 4 ಆಗಸ್ಟ್ 2023, 15:49 IST
Last Updated 4 ಆಗಸ್ಟ್ 2023, 15:49 IST
ಅಕ್ಷರ ಗಾತ್ರ

ಕೊಪ್ಪಳ: ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಉಪ ಗುತ್ತಿಗೆದಾರ ಬಾಗಲಕೋಟೆ ಜಿಲ್ಲೆಯ ರಾಂಪುರ ಗ್ರಾಮದ ಲಕ್ಷ್ಮಣ ಬಂಡಿವಡ್ಡರ (42) ಎಂಬುವರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷ ಕುಡಿದು ಜಿಲ್ಲಾಡಳಿತ ಭವನದಲ್ಲಿ ಮಲಗಿದ್ದನ್ನು ಗಮನಿಸಿದ ಅಲ್ಲಿನ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

‘ಲಕ್ಷ್ಮಣ ಬಳಿ ಎರಡು ವಿಷದ ಬಾಟಲ್‌ಗಳು ಹಾಗೂ ಒಂದು ಚೀಟಿ ಪತ್ತೆಯಾಗಿದ್ದು ಅದರಲ್ಲಿ ದಾವಣಗೆರೆಯ ಕೆವಿಆರ್ ಕನ್‌ಸ್ಟಕ್ಷನ್‌ ಹೆಸರಿನ ಲೆಟರ್‌ ಪ್ಯಾಡ್‌, ನಾರಾಯಣಪ್ಪ, ಪ್ರಜ್ವಲ್, ಶ್ರೀನಿವಾಸ ರಡ್ಡಿ, ವೆಂಕಟರಾಯ ರಡ್ಡಿ ಎಂಬುವರ ಹೆಸರು ಹಾಗೂ ಮೊಬೈಲ್ ಸಂಖ್ಯೆಯಿದ್ದು, ಹಣ ನೀಡಬೇಕಾಗಿದೆ ಎಂದು ಬರೆಯಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಡಿವೈಎಸ್‌ಪಿ ಶರಣಪ್ಪ ಸುಬೇದಾರ, ಕೊಪ್ಪಳ ನಗರ ಠಾಣೆ ಪೊಲೀಸ್‌ ಇನ್‌ಸ್ಟೆಕ್ಟರ್‌ ಸಂತೋಷ ಹಳ್ಳೂರು ಪರಿಶೀಲಿಸಿದರು.

‘ಲಕ್ಷ್ಮಣ ಇಲ್ಲಿಗೆ ಬಂದಿದ್ದು ಯಾಕೆ ಎನ್ನುವುದು ತಿಳಿದುಬಂದಿಲ್ಲ. ಈ ಕುರಿತು ವಿಚಾರಣೆ ನಡೆಸಲಾಗುತ್ತಿದೆ. ಸದ್ಯದ ಆರೋಗ್ಯ ಸ್ಥಿತಿ ಉತ್ತಮವಾಗಿದೆ. ಅವರ ಕುಟುಂಬದವರು ಬಂದ ಬಳಿಕ ಇನ್ನಷ್ಟು ಮಾಹಿತಿ ಲಭಿಸಲಿದೆ’ ಎಂದು ಪೊಲೀಸರು ಹೇಳಿದ್ದಾರೆ.

ಈತನ ಬಳಿ ಎರಡು ವಿಷದ ಬಾಟಲ್‌ಗಳು ಹಾಗೂ ಒಂದು ಚೀಟಿ ದೊರೆತಿದೆ. ಅದರಲ್ಲಿ ದಾವಣಗೆರೆ ಕೆವಿಆರ್ ಕನ್ಸ್ಟ್ರಕ್ಷನ್, ನಾರಾಯಣಪ್ಪ, ಪ್ರಜ್ವಲ್, ಶ್ರೀನಿವಾಸರಡ್ಡಿ, ವೆಂಕಟರಾಯರಡ್ಡಿ ಎಂಬುವರ ಹೆಸರು, ಮೊಬೈಲ್ ಸಂಖ್ಯೆ ಬರೆದಿದ್ದು, ಹಣ ನೀಡಬೇಕೆಂದು ಬರೆಯಲಾಗಿದೆ. ಆದರೆ, ಈತ ಕೊಪ್ಪಳಕ್ಕೆ ಆಗಮಿಸಿದ್ದು ಯಾಕೆ, ಜಿಲ್ಲಾಡಳಿತ ಭವನದಲ್ಲಿ ವಿಷ ಸೇವಿಸಿದ್ದು ಯಾಕೆಂಬುದು ಗೊತ್ತಾಗಿಲ್ಲ. ಡಿವೈಎಸ್ಪಿ ಶರಣಪ್ಪ ಸುಬೇದಾರ, ನಗರಠಾಣೆ ಪಿಐ ಸಂತೋಷ ಹಳ್ಳೂರು ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT