ಚಾಮರಾಜನಗರ: ತಾಲ್ಲೂಕಿನ ಬಿಆರ್ಟಿ ಹುಲಿ ಸಂರಕ್ಷಿತ ಪ್ರದೇಶದ ಬೇಡುಗುಳಿ ವಲಯದಲ್ಲಿ ಹುಲಿ ದಾಳಿಗೆ ಮಹಿಳೆ ಬಲಿಯಾಗಿದ್ದು ವ್ಯಕ್ತಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೇಡಗುಳಿ ಹಾಡಿಯ ರಂಗಮ್ಮ ಮೃತ ಮಹಿಳೆ. ರಾಮಯ್ಯನ ಪೋಡಿನ ರವಿ ಎನ್ನುವರು ಗಾಯಗೊಂಡವರು.

ಮೃತ ರಂಗಮ್ಮ ಮಂಗಳವಾರ ಬೆಳಗಿನ ಜಾವ ಬಹಿರ್ದೆಸೆಗೆ ಹೋಗಿದ್ದಾಗ ಹುಲಿ ದಾಳಿ ಮಾಡಿದ್ದು ಕೊಂದು ಹಾಕಿದೆ. ಸೋಮವಾರ ರಾತ್ರಿ ರವಿ ಹಾಡಿಗೆ ಮರಳುವಾಗ ಹುಲಿ ದಾಳಿ ಮಾಡಿದ್ದು ಅವರ ಕಿರುಚಾಟ ಕೇಳಿ ನೆರವಿಗೆ ಧಾವಿಸಿದ ಸ್ಥಳೀಯರು ಹುಲಿಯನ್ನು ಓಡಿಸಿದ್ದಾರೆ. ರವಿ ತಲೆಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು ಚಾಮರಾಜನಗರದ ಸಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಒಂದೇ ಹುಲಿಯಿಂದ ದಾಳಿ: ರಂಗಮ್ಮ ಹಾಗೂ ರವಿ ಮೇಲೆ ದಾಳಿ ನಡೆಸಿರುವ ಹುಲಿ ಒಂದೇ ಆಗಿದ್ದು ಕಾರ್ಯಾಚರಣೆ ಮೂಲಕ ಸೆರೆ ಹಿಡಿಯಲಾಗಿದೆ ಎಂದು ಬಿಆರ್ಟಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಸ್.ಶ್ರೀಪತಿ ತಿಳಿಸಿದ್ದಾರೆ.
.ಗುಂಡ್ಲುಪೇಟೆ | ಹುಲಿ ದಾಳಿ: ಎರಡು ಹಸು ಸಾವು.ಕಾರ್ಯಾಚರಣೆ ನಡುವೆಯೇ ಕರು ಮೇಲೆ ಹುಲಿ ದಾಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.