ತುಮಕೂರು: ಶಿರಾ ಉಪಚುನಾವಣೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತುಆಂಧ್ರಪ್ರದೇಶ ಕಾಂಗ್ರೆಸ್ ಘಟಕದ ಮಾಜಿ ಅಧ್ಯಕ್ಷ, ಮಡಕಶಿರಾ ಮಾಜಿ ಶಾಸಕ ಹಾಗೂ ಗೊಲ್ಲ ಸಮುದಾಯದ ಪ್ರಭಾವಿ ಮುಖಂಡ ರಘುವೀರಾ ರೆಡ್ಡಿ ಅವರ ಗೈರು ಕಾಂಗ್ರೆಸ್ ಮತ್ತು ಬಿಜೆಪಿ ಪಾಳಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಬಹಿರಂಗ ಪ್ರಚಾರಕ್ಕೆ ಶನಿವಾರ (ಅ.31) ಅಂತಿಮ ದಿನ. ಶಿರಾ ಮತದಾರರ ಮೇಲೆ ಪ್ರಭಾವ ಬೀರಬಲ್ಲ ಶಕ್ತಿ ಹೊಂದಿರುವ ಈ ಇಬ್ಬರು ನಾಯಕರು ಕೊನೆಯವರೆಗೂ ಅಖಾಡಕ್ಕೆ ಇಳಿಯಲೇ ಇಲ್ಲ. ಇಡೀ ಚುನಾವಣಾ ಪ್ರಕ್ರಿಯೆಯಿಂದಲೇ ಇಬ್ಬರೂ ದೂರ ಉಳಿದಿದ್ದಾರೆ!

ಮಾಧುಸ್ವಾಮಿ ಸ್ವಕ್ಷೇತ್ರ ಚಿಕ್ಕನಾಯಕನಹಳ್ಳಿ ಮತ್ತು ಶಿರಾ ಅಕ್ಕಪಕ್ಕದಲ್ಲಿವೆ. ಇಲ್ಲಿಯ ರಾಜಕಾರಣ ಅವರಿಗೆ ಚೆನ್ನಾಗಿ ಗೊತ್ತು. ಶಾಸಕರಾಗಿದ್ದ ಸತ್ಯನಾರಾಯಣ ನಿಧನದ ಬೆನ್ನಲ್ಲೇ ಶಿರಾದಲ್ಲಿ ಬಿಜೆಪಿ ಸಂಘಟನೆ ಆರಂಭವಾಗಿದೆ. ಅಂದಿನಿಂದಲೂ ಸಚಿವರು ದೂರವೇ ಉಳಿದಿದ್ದಾರೆ. ಇದನ್ನು ಪ್ರತಿಪಕ್ಷಗಳು ‘ಬಿಜೆಪಿಯೊಳಗೆ ಎಲ್ಲವೂ ಸರಿ ಇಲ್ಲ’ ಎಂದೇ ಪ್ರಚಾರಕ್ಕೆ ಬಳಸುತ್ತಿವೆ.

ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು, ‘ಕೊರೊನಾ ಸೋಂಕಿನಿಂದ ಗುಣಮುಖರಾಗಿರುವ ಮಾಧುಸ್ವಾಮಿ ಆರೋಗ್ಯ ಈಗ ಸುಧಾರಿಸುತ್ತಿದೆ’ ಎಂದು ಸಮಜಾಯಿಷಿ ನೀಡುತ್ತಿದ್ದಾರೆ.

ಹೇಮಾವತಿ ನೀರು ಹಂಚಿಕೆ ವಿಚಾರದಲ್ಲಿ ತುಮಕೂರು ಜಿಲ್ಲೆಗೆ ದೇವೇಗೌಡರ ಕುಟುಂಬ ಅನ್ಯಾಯ ಮಾಡಿದೆ ಎನ್ನುವ ವಿಚಾರ ಮುಂದಿಟ್ಟುಕೊಂಡು ಮಾಧುಸ್ವಾಮಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡರ ವಿರುದ್ಧ ಚುನಾವಣಾ ತಂತ್ರ ರೂಪಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.