ಬೆಂಗಳೂರು: ಸ್ವಾವಲಂಬಿ ಯೋಜನೆ ಅಡಿ ಜಮೀನು ನಕ್ಷೆಗಾಗಿ (ಸ್ಕೆಚ್) ಸಲ್ಲಿಸುವ ಪ್ರತಿ ಅರ್ಜಿಗೆ ₹1 ಸಾವಿರ ಶುಲ್ಕ ನಿಗದಿ ಮಾಡಲಾಗಿದೆ.

11–ಇ ನಕ್ಷೆ, ಭೂ ಪರಿರ್ತನೆಪೂರ್ವ ನಕ್ಷೆ, ತತ್ಕಾಲ್ ಪೋಡಿಗೆ ಎರಡು ಎಕರೆವರೆಗೆ ₹2,500 (ನಗರ) ಹಾಗೂ ₹1,500 (ಗ್ರಾಮೀಣ), ಎರಡು ಎಕರೆ ನಂತರ ಪ್ರತಿ ಎಕರೆಗೆ ಕ್ರಮವಾಗಿ ₹1 ಸಾವಿರ ಹಾಗೂ ₹ 400 ನಿಗದಿ ಮಾಡಲಾಗಿದೆ.

ಹದ್ದುಬಸ್ತುಗೆ ₹2 ಸಾವಿರ (ನಗರ) ಹಾಗೂ ₹500 (ಗ್ರಾಮೀಣ), ಎರಡು ಎಕರೆ ನಂತರ ಕ್ರಮವಾಗಿ ಪ್ರತಿ ಎಕರೆಗೆ ₹400 ಹಾಗೂ ₹300 ಶುಲ್ಕ ಪಾವತಿಸಬೇಕಿದೆ. ಈ ಆದೇಶ ಜ. 1ರಿಂದಲೇ ಅನ್ವಯವಾಗಲಿದೆ ಎಂದು ಕಂದಾಯ ಇಲಾಖೆ ಹೇಳಿದೆ.

ಗ್ರಾಮೀಣ ಜನರು ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಗೆ ಸಂಬಂಧಿಸಿದ ಕಾರ್ಯಗಳಿಗೆ ಇನ್ನು ಮುಂದೆ ಆಯಾ ಗ್ರಾಮ ಪಂಚಾಯಿತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲೇ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಇದುವರೆಗೂ ಹೋಬಳಿಮಟ್ಟದ ನಾಡಕಚೇರಿ, ಇಲ್ಲವೇ ತಾಲ್ಲೂಕು ಕಚೇರಿಗಳಿಗೆ ತೆರಳಬೇಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.