ಹಿಂದೂ ಧರ್ಮದ ಬಲವನ್ನು ಕುಗ್ಗಿಸುವ ಕಾಂಗ್ರೆಸ್‌ನ ಸಂಚನ್ನು ಜಾರಿಗೆ ತರುವಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕರ್ನಾಟಕವನ್ನು ಪ್ರಯೋಗಶಾಲೆ ಮಾಡಿಕೊಳ್ಳಲಾಗಿದೆ
ಆರ್.ಅಶೋಕ ವಿಧಾನಸಭೆ ವಿರೋಧ ಪಕ್ಷದ ನಾಯಕ
‘ಆಯೋಗದ ಕಚೇರಿಗೆ ಮುತ್ತಿಗೆ’
‘ಹಿಂದು ಉಪಜಾತಿಗಳು ಹಾಗೂ ಕಾಯಕ ಸಮುದಾಯಗಳಿಗೆ ಕ್ರಿಶ್ಚಿಯನ್ ಪದ ಜೋಡಿಸಿ ಸೃಷ್ಟಿಸಿದ್ದ ಹೊಸ ಜಾತಿಗಳನ್ನು ಕೊನೆಗೂ ಹಿಂದುಳಿದ ವರ್ಗಗಳ ಆಯೋಗ ಸಮೀಕ್ಷಾ ಪಟ್ಟಿಯಿಂದ ಕೈ ಬಿಡಲು ನಿರ್ಧರಿಸಿದೆ. ಈ ಬಗ್ಗೆ ಬಿಜೆಪಿ ನಡೆಸಿದ ಹೋರಾಟಕ್ಕೆ ಆಯೋಗ ಮಣಿದಿದೆ. ಆಯೋಗ ಸೃಷ್ಟಿಸಿದ ಇಂಥ 46 ಹೊಸ ಜಾತಿಗಳನ್ನು ಸಮೀಕ್ಷಾ ವ್ಯಾಪ್ತಿಯಿಂದ ಹೊರಗಿಡಲೇಬೇಕು’ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಸುನಿಲ್ ಕುಮಾರ್ ಒತ್ತಾಯಿಸಿದ್ದಾರೆ. ಈ ಬಗ್ಗೆ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅವರು ‘ಕೇವಲ 33 ಜಾತಿಗಳನ್ನು ಮಾತ್ರ ಕೈ ಬಿಟ್ಟರೆ ಸಾಲದು. ಆಯೋಗ ಈ ಬಗ್ಗೆ ಮರುಚಿಂತನೆ ನಡೆಸಿ ಸಮೀಕ್ಷೆ ಮುಂದೂಡಲಿ. ಆಯೋಗ ನಡೆಸಿದ್ದ ಈ ಪ್ರಯತ್ನ ಮೀಸಲು ವ್ಯವಸ್ಥೆಯನ್ನು ಕೆಡಿಸುವುದಷ್ಟೇ ಅಲ್ಲ ಮತಾಂತರಕ್ಕೆ ನೀಡುವ ಬಹಿರಂಗ ಪ್ರೇರಣೆ ಎಂಬ ನಮ್ಮ ನಿಲುವು ಅಚಲವಾಗಿದೆ’ ಎಂದಿದ್ದಾರೆ.