ಮಂಗಳೂರು: ‘ದೇಶದಲ್ಲಿ ಅಶಾಂತಿ ಮೂಡಿಸಲು ಹೊರಟವರಿಗೆ ತಕ್ಕ ಪಾಠ ಕಲಿಸಬೇಕಾಗಿದೆ. ಪರಿಶಿಷ್ಟರು, ಮುಸ್ಲಿಮರು, ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ ’ ಎಂದು ದಸಂಸ (ಅಂಬೇಡ್ಕರ್‌ವಾದ) ರಾಜ್ಯ ಘಟಕದ ಅಧ್ಯಕ್ಷ ಮಾವಳ್ಳಿ ಶಂಕರ್ ಆರೋಪಿಸಿದರು.

ಸಿಪಿಎಂ ಕರ್ನಾಟಕ ರಾಜ್ಯ ಸಮಿತಿ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಆಯೋಜಿಸಿರುವರಾಜ್ಯ ಮಟ್ಟದ ಮುಸ್ಲಿಂ ಸಮಾವೇಶದಲ್ಲಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗುತ್ತಿದೆ. ಪಠ್ಯಪುಸ್ತಕ ಪರಿಷ್ಕರಣೆಯಲ್ಲೂ ಗೊಂದಲ ಸೃಷ್ಟಿಸಲಾಗಿದೆ‘ ಎಂದರು.

‘ಭಾರತವನ್ನು ಪಾಕಿಸ್ತಾನದಂಥ ಮತಾಂಧ ರಾಷ್ಟ್ರವನ್ನಾಗಿಸಲು ಬಿಜೆಪಿ ಮತ್ತು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿವೆ. ಅದಕ್ಕೆ ಅವಕಾಶ ನೀಡಬಾರದು.ಜಾತ್ಯತೀತ ನಿಲುವು ಭಾರತದ ಜೀವವಾಯು. ಅದು ನಾಶವಾದರೆ ಭಾರತ ಇಲ್ಲವಾಗುತ್ತದೆ’ ಎಂದು ಸಮಾವೇಶ ಉದ್ಘಾಟಿಸಿದ ಕೇರಳದ ಶಾಸಕ ಡಾ.ಕೆ.ಟಿ. ಜಲೀಲ್ ಎಚ್ಚರಿಸಿದರು.

‘ಸಮದಾಯದ ಸಂಕಟವನ್ನು ರಾಜ್ಯಕ್ಕೆ ತಿಳಿಸುವುದು ಸಮಾವೇಶದ ಉದ್ದೇಶ. ಮುಸ್ಲಿಂ ಸಮಾವೇಶ’ ಎಂದು ಸಿಪಿಎಂ ರಾಜ್ಯ ಸಮಿತಿ ಸದಸ್ಯ ಮುನೀರ್ ಕಾಟಿಪಳ್ಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.