‘ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಅವರ ಹತ್ರನೂ ದುಡ್ಡಿಲ್ಲ. ಐತಿಹಾಸಿಕ ಪ್ರವಾಸಿ ತಾಣ ಅಭಿವೃದ್ಧಿಗೆ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯಲ್ಲಿ ಸೋಮವಾರ ಅಗ್ನಿಶಾಮಕ ತುರ್ತು ಸೇವೆಗಳ ಠಾಣೆ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ‘ನಾವು ಎಲ್ಲ ನಿಮಗೆ ಕೊಟ್ಟಿದ್ದೀವಿ. ಅಕ್ಕಿ, ಬ್ಯಾಳಿ, ಎಣ್ಣೆ, ಎಣ್ಣೆನೂ ಕೊಟ್ಟುಬಿಟ್ಟಿದ್ದೇವೆ’ ಎಂದರು. ‘ಕೇಂದ್ರ ದವರ ಹತ್ತಿರ ದುಡ್ಡಿದೆ. ನರೇಂದ್ರ ಮೋದಿ ಅವರ ಹತ್ತಿರ ಬೇಕಾದಷ್ಟು ದುಡ್ಡಿದೆ ಎಂದು ಹೇಳುತ್ತಾರೆ. ಅದನ್ನು ಕೇಳೋಣ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.