ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಮೂಲ್‌ನ ಬ್ರ್ಯಾಂಡ್ ಅಂಬಾಸಿಡರ್ ರೀತಿ ಸಿಎಂ ಬೊಮ್ಮಾಯಿ ವರ್ತನೆ: ಕಾಂಗ್ರೆಸ್ ಟೀಕೆ

Last Updated 9 ಏಪ್ರಿಲ್ 2023, 13:02 IST
ಅಕ್ಷರ ಗಾತ್ರ

ಬೆಂಗಳೂರು: ಅಮೂಲ್‌ನ ಬ್ರ್ಯಾಂಡ್ ಅಂಬಾಸಿಡರ್ ರೀತಿ ಬಸವರಾಜ ಬೊಮ್ಮಾಯಿ ವರ್ತಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ವ್ಯಂಗ್ಯವಾಗಿ ಟೀಕಿಸಿದೆ.

ಈ ಸಂಬಂಧ ಪ್ರಜಾವಾಣಿ ವರದಿ ಉಲ್ಲೇಖಿಸಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಅಮಿತ್ ಶಾ ಬಂದು ಹೋದನಂತರ ಕೆಎಂಎಫ್ ಹಾಲು ಸಂಗ್ರಹಣೆ ಹಾಗೂ ನಂದಿನಿ ಹಾಲು ಪೂರೈಕೆಯಲ್ಲಿ ಗಣನೀಯ ಪ್ರಮಾಣದ ಕುಸಿತ ಕಂಡಿರುವುದು ಅನುಮಾನಾಸ್ಪದವಾಗಿದೆ ಎಂದು ಕುಟುಕಿದೆ.

ಮುಖ್ಯಮಂತ್ರಿಗಳೇ ಇದು ವ್ಯವಸ್ಥಿತ ಸಂಚೇ ಅಥವಾ ನಿಮ್ಮ ದುರಾಡಳಿತದಲ್ಲಿ ರೈತರಿಗೆ ಒದಗಿದ ಸಂಕಷ್ಟವೇ? ‘ಹಾಲುಂಡ ತವರಿಗೆ’ ಏಕೆ ದ್ರೋಹ ಮಾಡುವಿರಿ? ಎಂದಿದೆ.

ರಾಜ್ಯದಲ್ಲಿ ನಂದಿನಿ ಹಾಲು ಪೊರೈಕೆಯಲ್ಲಿ ಕುಸಿತ ಕಂಡಿದೆ. ಕೋವಿಡ್‌ ನಂತರದಲ್ಲಿ ಹೈನುಗಾರಿಕೆ ಕ್ಷೇತ್ರ ಹಾಗೂ ಹಾಲು ಶೇಖರಣೆ ಪ್ರಮಾಣವು ಹೆಚ್ಚಾಗಿತ್ತು.

ಆದರೆ ಇದೀಗ ಸರಾಸರಿ ₹20 ಲಕ್ಷ ಕೆ.ಜಿ ಹಾಲು ಶೇಖರಣೆಯಲ್ಲಿ ಕಡಿಮೆಯಾಗಿದರಿಂದ ಪೂರೈಕೆಯಲ್ಲಿ ವ್ಯತ್ಯಯ ಕಂಡು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT