ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

Video: ಬಿಬಿಎಂಪಿ ಗುತ್ತಿಗೆ ಶಿಕ್ಷಕರು: ಭವಿಷ್ಯ ರೂಪಿಸುವವರ ಬದುಕೇ ಅತಂತ್ರ !

Published 5 ಜನವರಿ 2024, 5:27 IST
Last Updated 5 ಜನವರಿ 2024, 5:27 IST
ಅಕ್ಷರ ಗಾತ್ರ

ಬಿಬಿಎಂಪಿ ಶಾಲಾ–ಕಾಲೇಜುಗಳಿಗೆ ಶಿಕ್ಷಕರನ್ನು ಪೂರೈಸುವ ಜವಾಬ್ದಾರಿಯನ್ನು ಏಜೆನ್ಸಿಯ ಬದಲಿಗೆ ಶಿಕ್ಷಣ ಇಲಾಖೆಗೆ ವಹಿಸಲು ತೀರ್ಮಾನ ಮಾಡಿರುವುದು ಗುತ್ತಿಗೆ ಶಿಕ್ಷಕರನ್ನು ಚಿಂತೆಗೀಡು ಮಾಡಿದೆ. ಅಂದಹಾಗೆ, ಪ್ರೌಢಶಾಲೆಯಲ್ಲಿ ಬೋಧಿಸುತ್ತಿರುವ ಈ ಶಿಕ್ಷಕರು ಪಡೆಯುತ್ತಿರುವ ವೇತನ ತಿಂಗಳಿಗೆ ₹18,500 ಮಾತ್ರ. ಅತಿಥಿ ಶಿಕ್ಷಕರಾದರೆ ವೇತನ ಮತ್ತಷ್ಟು ಕಡಿಮೆಯಾಗಲಿದೆ ಎಂಬ ಆತಂಕದಲ್ಲಿರುವ ಈ ಶಿಕ್ಷಕರು, ಉಪನ್ಯಾಸಕರು ‘ನಮ್ಮ ಸೇವೆಯನ್ನು ಕಾಯಂ ಆಗಿ ಮಾಡದಿದ್ದರೂ ಬಿಬಿಎಂಪಿಯಿಂದ ನೇರಪಾವತಿ ಆಗುವಂತೆ ಮಾಡಬೇಕು ಎಂದು ಒತ್ತಾಯಿಸುತ್ತಾರೆ. ಸದ್ಯ ಬಿಬಿಎಂಪಿಯ ಶಾಲಾ–ಕಾಲೇಜುಗಳಲ್ಲಿ ಒಟ್ಟು 772 ಶಿಕ್ಷಕರು, ಉಪನ್ಯಾಸಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT