ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳಗಾವಿ ಅಧಿವೇಶನ | ಉತ್ತರ ಕರ್ನಾಟಕದ ಸಮಸ್ಯೆ: ಸವಿಸ್ತಾರ ಚರ್ಚೆ

Published 12 ಡಿಸೆಂಬರ್ 2023, 15:00 IST
Last Updated 12 ಡಿಸೆಂಬರ್ 2023, 15:00 IST
ಅಕ್ಷರ ಗಾತ್ರ

ವಿಧಾನಸಭೆ: ಕುಡಿಯುವ ನೀರಿಲ್ಲ, ಶಾಲೆಗಳಲ್ಲಿ ಶಿಕ್ಷಕರಿಲ್ಲ, ಉದ್ಯೋಗವಿಲ್ಲದೇ ಗುಳೆ ಹೋಗಿದ್ದ ಕೆಲವರು ಊರಿಗೆ ಜೀವಂತವಾಗಿ ಮರಳುವುದೇ ಇಲ್ಲ, ಕೆಲವೆಡೆ ಆಸ್ಪತ್ರೆ ಇದ್ದರೂ ವೈದ್ಯರೇ ಇಲ್ಲ...

ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕ ಸೇರಿದಂತೆ ‘ಉತ್ತರ ಕರ್ನಾಟಕ’ದ ಸಮಸ್ಯೆಗಳ ಮೇಲೆ ಮಂಗಳವಾರ ನಡೆದ ಚರ್ಚೆಯಲ್ಲಿ, ಪಾಲ್ಗೊಂಡ ಸದಸ್ಯರು ‘ಇಲ್ಲ’ಗಳ ಸರಣಿಯನ್ನೇ  ಸದನದ ಮುಂದಿಟ್ಟರು. ತಮ್ಮ ಭಾಗವನ್ನು ಕಡೆಗಣಿಸುತ್ತಿರುವುದರ ನೋವು ಕೆಲವೊಮ್ಮೆ ಆಕ್ರೋಶವಾಗಿ ಹೊರಹೊಮ್ಮಿತು. 

ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ, ‘ಅಭಿವೃದ್ಧಿ ಮತ್ತು ರಾಜಕೀಯ ಅಧಿಕಾರ ಹಂಚಿಕೆಯಲ್ಲಿ ಉತ್ತರ ಕರ್ನಾಟಕವನ್ನು ನಿರಂತರವಾಗಿ ಕಡೆಗಣಿಸುತ್ತಾ ಬರಲಾಗಿದೆ. ಇದು ಮುಂದುವರಿದರೆ ಈ ಭಾಗದ ಜನರು ಬಜರಂಗಿಗಳಾಗಿ ಬೀದಿಗಿಳಿಯಬಹುದು. ಇನ್ನು ಮುಂದಾದರೂ ನಿರ್ಲಕ್ಷ್ಯ ಧೋರಣೆ ಕೈಬಿಡಬೇಕು’ ಎಂದು ಆಗ್ರಹಿಸಿದರು.

ಆಡಳಿತ ಯಂತ್ರವನ್ನು ಉತ್ತರಕ್ಕೆ ತರುವ ಪ್ರಯತ್ನ ಆಗಬೇಕು. ಸುವರ್ಣ ವಿಧಾನಸೌಧಕ್ಕೆ ಪ್ರಮುಖ ಕಚೇರಿಗಳ ಸ್ಥಳಾಂತರ ಆಗಬೇಕು. ಪ್ರತಿ ಎರಡರಲ್ಲಿ ಒಂದು ಸಂಪುಟ ಸಭೆಯನ್ನು ಸುವರ್ಣ ವಿಧಾನಸೌಧದಲ್ಲಿ ನಡೆಸಬೇಕು. ನೀರಾವರಿ ಯೋಜನೆಗಳಿಗೆ ₹ 25,000 ಕೋಟಿ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.‌

‌ಉತ್ತರ ಕರ್ನಾಟಕದ ಮೇಲೆ ನಡೆದ ಚರ್ಚೆಯಲ್ಲಿ ಬಿಜೆಪಿಯ ಶರಣು ಸಲಗರ, ಅವಿನಾಶ ಜಾಧವ್,  ಕಾಂಗ್ರೆಸ್‌ನ ರಾಜು ಕಾಗೆ, ಜೆ.ಎನ್. ಗಣೇಶ್‌, ಜೆಡಿಎಸ್‌ನ ಕರೆಮ್ಮ ಜಿ ನಾಯಕ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT