ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣ: ವಿಚಾರಣೆಗೆ ಹಾಜರಾಗದ ಭವಾನಿ ರೇವಣ್ಣ

Published 1 ಜೂನ್ 2024, 23:19 IST
Last Updated 1 ಜೂನ್ 2024, 23:19 IST
ಅಕ್ಷರ ಗಾತ್ರ

ಹೊಳೆನರಸೀಪುರ (ಹಾಸನ): ಮೈಸೂರು ಜಿಲ್ಲೆಯ ಕೆ.ಆರ್. ನಗರ ಠಾಣೆಯಲ್ಲಿ ದಾಖಲಾಗಿರುವ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ, ಭವಾನಿ ರೇವಣ್ಣ ಅವರ ವಿಚಾರಣೆ ಸಲುವಾಗಿ ಇಲ್ಲಿನ ಚನ್ನಾಂಬಿಕಾ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಬಂದ ಎಸ್‌ಐಟಿ ಅಧಿಕಾರಿಗಳು ಸಂಜೆವರೆಗೂ ಕಾದು, ಅವರು ಸಿಗದೇ ವಾಪಸಾದರು. 

ಶನಿವಾರ ವಿಚಾರಣೆಗೆ ಹಾಜರಿರುವಂತೆ ಮೇ 30ರಂದು ಭವಾನಿ ಅವರಿಗೆ ಎಸ್‌ಐಟಿ ನೋಟಿಸ್‌ ನೀಡಿತ್ತು. ಅದರಂತೆ, ಅಧಿಕಾರಿ ಶ್ರೀಧರ್ ಹಾಗೂ ಮಹಿಳಾ ಅಧಿಕಾರಿಗಳನ್ನು ಒಳಗೊಂಡ ತಂಡ ಚನ್ನಾಂಬಿಕಾ ನಿವಾಸಕ್ಕೆ ಬಂದಿತ್ತು. ಗೇಟ್‌ ತೆಗೆದು, ಮನೆಯ ಆವರಣ ದಲ್ಲಿಯೇ ಕುಳಿತಿದ್ದ ಅಧಿಕಾರಿಗಳು, ಭವಾನಿ ಅವರ ಬರುವಿಕೆಗಾಗಿ ಕಾದರು. ಆದರೆ, ಸಂಜೆಯವರೆಗೂ ಭವಾನಿ ಅವರು ಮನೆಗೆ ಬರಲಿಲ್ಲ. ಮನೆಯಲ್ಲಿ ಭದ್ರತಾ ಸಿಬ್ಬಂದಿ ಹೊರತುಪಡಿಸಿ ಬೇರಾರೂ ಇರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT