ರಾಜೀನಾಮೆ ಏಕೆ ಕೊಡಲಿ: ತಿಮ್ಮಾಪುರ
‘ಈ ಹಿಂದೆ ಯಾರ‍್ಯಾರು ಅಬಕಾರಿ ಸಚಿವರಾಗಿದ್ದರೊ ಅವರೆಲ್ಲರ ಮೇಲೆಯೂ ಆರೋಪಗಳು ಬಂದಿವೆ. ನನ್ನ ಮೇಲೂ ಆರೋಪ ಮಾಡಿದ್ದಾರೆ. ತೇಜೋವಧೆ ಮಾಡಬೇಕಾದರೆ ಆಧಾರ ಬೇಡವೇ? ಹೀಗಾಗಿ ನಾನು ರಾಜೀನಾಮೆ ಕೊಡುವುದಿಲ್ಲ’ ಎಂದು ತಿಮ್ಮಾಪುರ ಹೇಳಿದರು. ‘ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಕೆ. ಗೋಪಾಲಯ್ಯ ಶಶಿಕಲಾ ಜೊಲ್ಲೆ ಸಿ.ಸಿ. ಪಾಟೀಲ ಮೇಲೆಯೂ ಲಂಚದ ಆರೋಪ ಬಂದಿತ್ತು. ಅವರೇನು ರಾಜೀನಾಮೆ ಕೊಟ್ಟಿದ್ದಾರೆಯೇ? ಈಗ ಬಂದಿರುವ ಆರೋಪದಲ್ಲಿ ನನ್ನ ಪಾತ್ರವೇನಿದೆ? ಆರೋಪದಲ್ಲಿ ಸಿಲುಕಿಕೊಂಡಿರುವ ಅಧಿಕಾರಿಗಳಿಗೂ ನನಗೂ ಯಾವುದೇ ಸಂಬಂಧ ಇಲ್ಲ’ ಎಂದರು. ಆರೋಪ ಮಾಡಿರುವ ಮದ್ಯ ಮಾರಾಟಗಾರರ ಸಂಘ ಅಸ್ತಿತ್ವದಲ್ಲಿಯೇ ಇಲ್ಲ ಎಂದೂ ಹೇಳಿದರು.