ಶಿವಮೊಗ್ಗ: ‘ಬಿಜೆಪಿ ಶಾಸಕರು ಕೋವಿಡ್ ನಿಯಮ ಉಲ್ಲಂಘನೆ ಮಾಡಿದರೆ ಅವರ ವಿರುದ್ಧವೂ ಪ್ರಕರಣ ದಾಖಲಿಸಬೇಕು ಎಂಬುದು ನನ್ನ ಒತ್ತಾಯ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

‘ಕೋವಿಡ್ ನಿಯಮ ಉಲ್ಲಂಘನೆಗೆ ಪ್ರಕರಣ ದಾಖಲಿಸುವುದು ಕಾಂಗ್ರೆಸ್‌ನವರಿಗೆ ಮಾತ್ರ ಅಂತಲ್ಲ. ಆದರೆ, ಕಾಂಗ್ರೆಸ್‌ನವರು ಅದೇ ದಂಧೆ ಮಾಡಿಕೊಂಡಿದ್ದಾರೆ’ ಎಂದು ಕುಟುಕಿದರು.

‘ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಕೊರೊನಾ ನಿಯಮ ಉಲ್ಲಂಘಿಸಿದ ನಮ್ಮ ಶಾಸಕ ರೇಣುಕಾಚಾರ್ಯ ಕೊನೆಗೆ ಕ್ಷಮೆಯನ್ನಾದರೂ ಕೇಳಿದರು. ಆದರೆ, ಕಾಂಗ್ರೆಸ್‌ನವರಿಗೆ ಕ್ಷಮೆ ಕೇಳುವ ಸೌಜನ್ಯವೂ ಇಲ್ಲ. ಏನ್ ಮಾಡ್ತೀರಾ ಮಾಡ್ಕೊಳ್ಳಿ ಅಂತಾರೆ. ಅಲ್ಲೂ ದಾದಾಗಿರಿ, ಗೂಂಡಾಗಿರಿ ಎಂಬುದು ಕಾಂಗ್ರೆಸ್‌ನಲ್ಲಿರುವ ವ್ಯವಸ್ಥೆ’ ಎಂದರು.

‘ಕೋವಿಡ್ ಯಾವ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದನ್ನೂ ಕೂಡ ಸುಳ್ಳು ಅಂಕಿ–ಅಂಶ ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಆಗುವ ಕನಸು ಕಾಣುತ್ತಿರುವ ವ್ಯಕ್ತಿ ಸರ್ಕಾರ ನೀಡಿದ ಅಂಕಿ–ಅಂಶ ಸುಳ್ಳು ಎಂದು ಹೇಳಿದರೆ ಹೇಗೆ? ಕಾಂಗ್ರೆಸ್‌ನವರು ಸ್ವಾತಂತ್ರ್ಯ ಬಂದಾಗಿನಿಂದ ಕೇಂದ್ರ ಹಾಗೂ ರಾಜ್ಯದಲ್ಲಿ ಆಳ್ವಿಕೆ ಮಾಡಿ ಅಂಕಿ–ಅಂಶ ಕೊಟ್ಟಿದ್ದಾರೆ. ಇದು ಸುಳ್ಳು ಎಂದು ಹೇಳೋಕೆ ಆಗುತ್ತಾ? ನಾನು ಹಾಗೆ ಹೇಳಲ್ಲ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.