ಭಾನುವಾರ, 22 ಫೆಬ್ರುವರಿ 2026
×
ADVERTISEMENT
ADVERTISEMENT

ಲಂಚ ಪ್ರಕರಣ: ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಇಬ್ಬರು ಆಪ್ತರು ಜೈಲಿಗೆ

Published : 22 ಫೆಬ್ರುವರಿ 2026, 17:22 IST
Last Updated : 22 ಫೆಬ್ರುವರಿ 2026, 17:22 IST
ಫಾಲೋ ಮಾಡಿ
Comments
ವಿಜಯ್‌ ಪೂಜಾರ
ವಿಜಯ್‌ ಪೂಜಾರ
‘ನಾಟಕ ಮಾಡ್ತೀಯಾ ನಡಾನೇ ಮುರಿಸ್ತಿನಿ...’
ಶಾಸಕ ಡಾ.ಚಂದ್ರು ಲಮಾಣಿ ಅವರು ಗುತ್ತಿಗೆದಾರ ವಿಜಯ್‌ ಪೂಜಾರಗೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾದ ‌ಆಡಿಯೊ ‘ಪ್ರೀತಿ ವಿಶ್ವಾಸದಿಂದ ಹೇಳಿದರೆ ನಾಟಕ ಮಾಡ್ತೀಯಾ’ ಎಂಬ ಮಾತುಗಳಿಂದ ಆರಂಭವಾಗಲಿದೆ. ‘ಯಲ್ಲಮ್ಮಂಗೆ ಹೋಗಿನಿ ಮಲ್ಲಮ್ಮಂಗೆ ಹೋಗಿನಿ ಬೆಳ್ಳಮ್ಮಂಗೆ ಹೋಗಿನಿ... ನೀನು ನಿಮ್ಮ ತಾಲ್ಲೂಕಿನಲ್ಲಿ ಮಾಡಿದಂತೆ ನಮ್ಮ ತಾಲ್ಲೂಕಿನಲ್ಲಿ ಮಾಡಿದರೆ ನಡ ಮುರಿದು ಕಳಿಸ್ತೀವಿ’ ಎಂಬ ಎಚ್ಚರಿಕೆಯ ಮಾತುಗಳಿವೆ. ಮುಂದುವರಿದು ‘ನೀನೇನಾದರೂ ನನಗೆ ಸರಳವಾಗಿ ಅನ್ಕೊಂಡ್ರೆ ನಡಾನೇ ಮುರಿಸ್ತೀನಿ. ಏನ್‌ ನಮ್ನೇನು ನಿನ್‌ ತರ್‌ ಲೂಸ್‌ ಅಂತ ಅನ್ಕೋಂಡಿಯಾ ಏಯ್‌ ಬಿಡೋ’ ಎಂದು ಬೆದರಿಕೆಯ ಮಾತುಗಳು ಆಡಿಯೊದಲ್ಲಿವೆ. 
ಕುಮಾರ ಮಹಾರಾಜ ಸ್ವಾಮೀಜಿ
ಕುಮಾರ ಮಹಾರಾಜ ಸ್ವಾಮೀಜಿ
‘ಲಮಾಣಿ ಧೈರ್ಯ ಎಂತದ್ದು ಟಿಕೆಟ್‌ ತಪ್ಪಿಸಬೇಕು...’ 
ಲಂಬಾಣಿ ಸಮಾಜದ ಆದರಳ್ಳಿ ಮಠದ ಕುಮಾರ ಮಹಾರಾಜ ಸ್ವಾಮೀಜಿ ಅನಾಮಿಕನ ಜೊತೆ ಚರ್ಚಿಸಿದ್ದಾರೆ ಎನ್ನಲಾದ ಆಡಿಯೊದಲ್ಲಿ ‘ಶಾಸಕ ಚಂದ್ರು ಲಮಾಣಿ ಧೈರ್ಯ ಎಂತದ್ದು ಇರಬಹುದು. ಮುಂದೆ ಅವನಿಗೆ ಟಿಕೆಟ್‌ ತಪ್ಪಿಸಲೇಬೇಕು’ ಎಂಬ ಮಾತುಗಳಿವೆ. ‘ಟಿಕೆಟ್‌ ತಪ್ಪಿಸದ ಹೊರತು ಸಮಾಧಾನ ಇಲ್ಲ. ಇಂಥವರಿಗೆ ಸೂತ್ರದ ಗಾಳ ಹಾಕಿ ಸಿಕ್ಕಿಸಲು ಬೆಂಗಳೂರಿನಲ್ಲಿ ಒಂದು ಟೀಮ್‌ ಇದೆ. ನೋಟಿಗೆ ಪೌಡರ್‌ ಹಚ್ಚಿ ಐಟಿಗೆ ಒಗಿಸಿಬಿಟ್ರೆ ಆಯ್ತು. ಅಲ್ಲಿಗೆ ಸುಮ್ಮನೆ ಕೂರುತ್ತಾನೆ’ ಎಂಬ ಸಂಭಾಷಣೆ ಆಡಿಯೊದಲ್ಲಿದೆ.
ಧ್ವನಿ ನನ್ನದೇ ದಾಳಿ ಹಿಂದೆ ಕೈವಾಡವಿಲ್ಲ –ಸ್ವಾಮೀಜಿ 
ಆಡಿಯೊ ಕುರಿತು ಪ್ರತಿಕ್ರಿಯಿಸಿದ ಕುಮಾರ ಮಹಾರಾಜರು ‘ಇದು ನನ್ನದೇ ಧ್ವನಿ. ವರ್ಷದ ಹಿಂದಿನದ್ದು. ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಪ್ರತಿಭಟನೆ ಕೈಗೊಂಡಿದ್ದಾಗ ನನ್ನನ್ನು ಮಠ ಬಿಡಿಸಲು ಪ್ರಯತ್ನಿಸಿದ್ದರು. ಆಗ ಸಿಟ್ಟಿನಲ್ಲಿ ಮಾತನಾಡಿದ್ದೆ. ಇಂತಹ ಇನ್ನೂ ಎರಡು ಮೂರು ಆಡಿಯೊಗಳನ್ನೂ ಹರಿಬಿಟ್ಟಿದ್ದಾರೆ’ ಎಂದರು. ‘ಶಾಸಕರ ವಿರುದ್ಧ ದೂರು ಕೊಟ್ಟಿರುವ ಗುತ್ತಿಗೆದಾರನಿಗೂ ನನಗೂ ಪರಿಚಯವೇ ಇಲ್ಲ. ಅಲ್ಲದೆ ‘ಲೋಕಾ’ ಅಧಿಕಾರಿಗಳ ದಾಳಿಗೂ ನನಗೂ ಸಂಬಂಧ ಇಲ್ಲ’ ಎಂದು ಹೇಳಿದರು. ‘ಸದ್ಯ ಮೈಸೂರಿನ ಕಾರ್ಯಕ್ರಮದಲ್ಲಿದ್ದು ಅಲ್ಲಿಗೆ ಬಂದ ನಂತರ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ವಿವರವಾಗಿ ತಿಳಿಸುವೆ. ಇದರಲ್ಲಿ ನನ್ನ ಕೈವಾಡ ಇದೆ ಎಂಬ ಶಂಕೆ ಇದ್ದರೆ ಪೊಲೀಸರಿಗೆ ನನ್ನ ಎರಡೂ ಮೊಬೈಲ್‌ಗಳನ್ನು ಕೊಡುವೆ. ಅವರು ಪರಿಶೀಲಿಸಲಿ’ ಎಂದರು.
ಶಾಸಕ ಚಂದ್ರು ಲಮಾಣಿ ಅವರ ಪ್ರಕರಣದಲ್ಲಿ ಲೋಕಾಯುಕ್ತ ಸಂಸ್ಥೆ ಸರಿಯಾದ ತನಿಖೆ ನಡೆಸಲಿದೆ. ನಾವು ಯಾವುದೇ ಹಸ್ತಕ್ಷೇಪ ಮಾಡುವುದಿಲ್ಲ
ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿ
ಚಂದ್ರು ಅವರನ್ನು ಲೋಕಾಯುಕ್ತ ದಾಳಿಯಲ್ಲಿ ಸಿಲುಕಿಸಿರುವುದು ಸಂಚು. ನಮ್ಮ ಪಕ್ಷ ಇಂತಹ ವಿಚಾರಗಳನ್ನು ಸಹಿಸಲ್ಲ. ಕಾಂಗ್ರೆಸ್‌ ನವರು ಎಲ್ಲರನ್ನು ಟಾರ್ಗೆಟ್‌ ಮಾಡಿದ್ದಾರೆ
ಛಲವಾದಿ ನಾರಾಯಣಸ್ವಾಮಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ
ಬಂಧನಕ್ಕೆ ಒಳಗಾದ ಶಾಸಕರು
ಶೇ 40ರಷ್ಟು ಶಾಸಕರು ಕಮಿಷನ್ ದಂಧೆಕೋರರು: ಆರೋಪ
ಹೊಸಪೇಟೆ (ವಿಜಯನಗರ): ‘ರಾಜ್ಯದಲ್ಲಿ ಪಕ್ಷಾತೀತವಾಗಿ ಶೇ 30ರಿಂದ 40ರಷ್ಟು ಶಾಸಕರು ಕಮಿಷನ್ ದಂಧೆಕೋರರಾಗಿದ್ದಾರೆ. ಕೆಲವರು ನೇರವಾಗಿ ಶಾಮೀಲಾಗಿದ್ದಾರೆ. ಅದರ ಭಾಗವಾಗಿಯೇ ಶಿರಹಟ್ಟಿ ಶಾಸಕರು ಸಿಕ್ಕಿಬಿದ್ದಿದ್ದಾರೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT