ಬೆಂಗಳೂರು: ‘ಸದನದಲ್ಲಿ ಮಹಿಳೆಯರಿಗೆ ಗೌರವ ಸಿಗುತ್ತಿಲ್ಲ. ಸತತವಾಗಿ ಅವಮಾನ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಬಿಜೆಪಿಯ ಭಾರತಿ ಶೆಟ್ಟಿ ಅವರು ಸಭಾತ್ಯಾಗ ಮಾಡಿದರು.

ವಿಧಾನಪರಿಷತ್ನಲ್ಲಿ ಸಿ.ಟಿ.ರವಿಯವರು ‘ನಾಲಗೆ’ ಪದ ಬಳಕೆ ಮಾಡಿದ್ದಕ್ಕೆ, ಕ್ಷಮೆ ಕೇಳಬೇಕೆಂದು ಕಾಂಗ್ರೆಸ್ ಸದಸ್ಯರು ಪಟ್ಟುಹಿಡಿದಿದ್ದರು. ಆಗ ಮಾತನಾಡಿದ ಭಾರತಿ ಶೆಟ್ಟಿ ಅವರು, ಕಾಂಗ್ರೆಸ್ನ ಕೆಲವರು ಮಹಿಳೆಯರಿಗೆ ಗೌರವ ನೀಡುವುದಿಲ್ಲ. ಹಿಂದೆ ಒಬ್ಬರು ಸಚಿವರು ‘ಕೆಲಸ ಪಡೆಯಲು ಪುರುಷರು ಲಂಚ ಕೊಡಬೇಕು. ಮಹಿಳೆಯರು ಮಂಚ ಹತ್ತಬೇಕು’ ಎಂದಿದ್ದರು. ಇದು ನಮ್ಮ ಸಂಸ್ಕೃತಿಯೇ’ ಎಂದು ಪ್ರಶ್ನಿಸಿದರು.

ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಭಾ ನಾಯಕ ಬೋಸರಾಜು, ‘ಸದನದಲ್ಲಿ ಯಾರು ಆ ರೀತಿ ಮಾತನಾಡಿಲ್ಲ. ಸದನದ ಹೊರಗೆ ಯಾರು ಮಾತನಾಡಿದ್ದಾರೆ ಗೊತ್ತಿಲ್ಲ. ಇಂತಹ ಗಂಭೀರ ಆರೋಪವನ್ನು ಸದನದ ಒಳಗೆ ಮಾಡುವುದು ಸರಿಯಲ್ಲ’ ಎಂದರು. ಕಾಂಗ್ರೆಸ್, ಬಜೆಪಿ ಸದಸ್ಯರ ಮಾತಿನ ಚಕಮಕಿ ನಡುವೆ ಭಾರತಿ ಶೆಟ್ಟಿ ಸಭಾತ್ಯಾಗ ಮಾಡಿದರು.

ಏಕ ವಚನ ಪ್ರಯೋಗ: ಭಾರತಿ ಶೆಟ್ಟಿ ಮಾತಿಗೆ ರಮೇಶ್ ಬಾಬು ಆಕ್ಷೇಪ ಎತ್ತಿದಾಗ ಬಿಜೆಪಿಯ ಕೇಶವ ಪ್ರಸಾದ್, ಕುಳಿತುಕೊಳ್ಳುವಂತೆ ಅವರಿಗೆ ಹೇಳಿದರು. ಆಗ ರಮೇಶ್ ಬಾಬು ‘ನಾನು ನಿನ್ನ ಗುಲಾಮ ಅಲ್ಲ, ನೀನು ಯಾರು ನನಗೆ ಹೇಳಲು’ ಎಂದು ಗದರಿದರು.

ನಾಲಗೆ ಮಾತಿನ ವಿವಾದದ ಕಾರಣಕ್ಕೆ ಸಿ.ಟಿ.ರವಿ ಅವರು ಮಧ್ಯಾಹ್ನದ ನಂತರ ಸದನಕ್ಕೆ ಬಂದಿರಲಿಲ್ಲ. ಅವರನ್ನು ಕರೆಯಿಸುವಂತೆ ಸಭಾಪತಿ ಸೂಚಿಸಿದರು. ಅದಕ್ಕೆ ನಸೀರ್ ಅಹಮದ್, ಇದು ‘ಮ್ಯಾಚ್ ಫಿಕ್ಸಿಂಗ್’ ಎಂದರು. ಅದಕ್ಕೆ ಸಭಾಪತಿ ಬಸವರಾಜ ಹೊರಟ್ಟಿ ಕೆರಳಿದರು. ವಿರೋಧ ಪಕ್ಷದ ಮುಖ್ಯಸಚೇತಕ ಎನ್.ರವಿಕುಮಾರ್, ‘ಇವೆರೆಲ್ಲ ಸೇರಿಯೇ ಧರ್ಮೇಗೌಡರನ್ನು ಪೀಠದಿಂದ ಎಳೆದು ತಂದಿದ್ದು’ ಎಂದರು. ಆಗ ಮಧ್ಯ ಪ್ರವೇಶಿಸಿದ ಬಿ.ಕೆ.ಹರಿಪ್ರಸಾದ್, ‘ಅದು ನಿಮಗಲ್ಲ. ಬಿಜೆಪಿ ಕುರಿತು ಹೇಳಿದ್ದು’ ಎಂದು ಹೇಳಿ ಬಿಗುವಿನ ವಾತಾವರಣವನ್ನು ತಿಳಿಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.