ಬೆಂಗಳೂರು: ‘ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿ ಕಾಣಿಸಿಕೊಂಡಿದ್ದ ಸೂಟ್ಕೇಸ್ಗಳಲ್ಲಿ ಬಟ್ಟೆಗಳು ಸಿಕ್ಕಿವೆ. ಸುತ್ತಲಿನ ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದ್ದು, ಸೂಟ್ಕೇಸ್ಗಳ ವಾರಸುದಾರರನ್ನು ಶೀಘ್ರವೇ ಪತ್ತೆಹಚ್ಚಲಾಗುತ್ತದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಮಳಿಗೆಯೊಂದರ ಬಳಿ ನಿಲ್ಲಿಸಿದ್ದ ಸ್ಕೂಟರ್ ಮೇಲೆ ಕಪ್ಪು ವರ್ಣದ ಎರಡು ಸೂಟ್ಕೇಸ್ಗಳು ಇದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದರು. ಅವುಗಳಲ್ಲಿ ಬಾಂಬ್ ಇರಬಹುದೆಂದು ಶಂಕಿಸಲಾಗಿತ್ತು. ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಸೂಟ್ಕೇಸ್ಗಳನ್ನು ಸ್ವಾತಂತ್ರ್ಯ ಉದ್ಯಾನಕ್ಕೆ ತೆಗೆದುಕೊಂಡು ಹೋಗಿದ್ದರು. ಅಲ್ಲಿ ಅದನ್ನು ವೈಜ್ಞಾನಿಕ ರೀತಿಯಲ್ಲಿ ತೆರೆದು ನೋಡಿದಾಗ ಬಟ್ಟೆಗಳು ಸಿಕ್ಕಿವೆ.ಗುರುತಿನ ಚೀಟಿಯೊಂದು ಪತ್ತೆಯಾಗಿದೆ. ಯಾರಾದರೂ ಮರೆತು ಅವುಗಳನ್ನು ಬಿಟ್ಟುಹೋಗಿರಬಹುದು’ ಎಂದು ಡಿಸಿಪಿ ಸಂಜೀವ್ ಪಾಟೀಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.