ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರು ನೀಡಲು ಆಯೋಗದ ಸಿ– ವಿಜಿಲ್‌ ಆ್ಯಪ್‌

Last Updated 10 ಮಾರ್ಚ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣೆ ಸಂಬಂಧಿಸಿಅಕ್ರಮಗಳ ದೂರು ನೀಡಲು ಆಯೋಗವು ಸಿ– ವಿಜಿಲ್‌ ಎಂಬ ಮೊಬೈಲ್‌ ಆ್ಯಪ್‌ ರೂಪಿಸಿದೆ. ಇದರಲ್ಲಿ ಅಕ್ರಮಗಳು ನಡೆಯುತ್ತಿದ್ದಲ್ಲಿ ಅದರ ವಿವರಗಳನ್ನು ನೀಡಬಹುದು.

ದೂರು ನೀಡಿದ 100 ನಿಮಿಷಗಳ ಒಳಗೆ ಸಂಬಂಧಿಸಿದ ವಿಚಕ್ಷಣಾ ದಳದವರು ಸ್ಥಳಕ್ಕೆ ಭೇಟಿ ನೀಡಿ ಕೈಗೊಂಡ ಕ್ರಮದ ಬಗ್ಗೆ ಆಯೋಗಕ್ಕೆ ವರದಿ ನೀಡಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್‌ ಹೇಳಿದರು.

ಹೇಗೆ ಕಾರ್ಯನಿರ್ವಹಣೆ?: ವಿಚಕ್ಷಣ ದಳದ ಎಲ್ಲ ವಾಹನಗಳಿಗೆ ಜಿಪಿಎಸ್‌ ಅಳವಡಿಸಿರಲಾಗುತ್ತದೆ. ದೂರು ಬಂದ ತಕ್ಷಣ ಸಂಬಂಧಿಸಿದ ಸ್ಥಳದ ಅತ್ಯಂತ ಸಮೀಪವಿರುವ ತಂಡಕ್ಕೆ ಮಾಹಿತಿ ರವಾನೆಯಾಗುತ್ತದೆ.

ದೂರು ಸಲ್ಲಿಕೆಯಾದ 15 ನಿಮಿಷಗಳ ಒಳಗೆ ಅವರು ಸ್ಥಳ ತಲುಪಬೇಕು. ಬಳಿಕ ವಿಷಯ ಪರಿಶೀಲಿಸಿಕ್ರಮ ಕೈಗೊಳ್ಳಬೇಕು. ಸಹಾಯವಾಣಿ 1950 ಮೂಲಕವೂ ದೂರು ನೀಡಬಹುದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT