ಬೆಂಗಳೂರು: ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ದಾಸ್ ಅವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗ ಸಲ್ಲಿಸಿದ ಒಳಮೀಸಲಾತಿ ವರದಿಯಲ್ಲಿ ಹಲವು ಗೊಂದಲಗಳಿದ್ದು, ತಪ್ಪು ಸರಿಪಡಿಸಲು ಸಂಪುಟ ಉಪಸಮಿತಿ ರಚಿಸಬೇಕು ಎಂದು ಕರ್ನಾಟಕ ರಾಜ್ಯ ಛಲವಾದಿ ಮಹಾಸಭಾ ಒತ್ತಾಯಿಸಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಹಾಸಭಾದ ಅಧ್ಯಕ್ಷರೂ ಆದ ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ ಪತ್ರ ಬರೆದಿದ್ದಾರೆ.

‘ಬಲಗೈನಲ್ಲಿರುವ 49 ಮೂಲ ಉಪ ಜಾತಿಗಳನ್ನು ಒಂದೇ ಗುಂಪಿನಡಿ ಗುರುತಿಸಿಲ್ಲ. ಕೆಲವರನ್ನು ಶೇ 1ರ ಮೀಸಲಾತಿ ಗುಂಪಿಗೆ ಸೇರಿಸಲಾಗಿದೆ. ಇಂತಹ ಏಕಪಕ್ಷೀಯ, ಪಕ್ಷಪಾತದಿಂದ ಕೂಡಿದ ವರದಿಯನ್ನು ಯಥಾವತ್ ಒಪ್ಪಿಕೊಳ್ಳದೆ ಸಂಪುಟ ಉಪಸಮಿತಿಗೆ ವಹಿಸಬೇಕು. ಬಲಗೈ ಸಮುದಾಯಕ್ಕೆ ಸೇರ್ಪಡೆಗೊಳ್ಳುವ ಜಾತಿಗಳನ್ನು ನಮೂದಿಸಿ ಸರ್ಕಾರಿ ಆದೇಶ ಹೊರಡಿಸಬೇಕು. ಸಂಗ್ರಹಿಸಿದ ದತ್ತಾಂಶಗಳನ್ನು ದೃಢೀಕರಿಸಲು 15 ದಿನಗಳ ಅವಕಾಶ ನೀಡಬೇಕು. ಒಳಮೀಸಲಾತಿ ಮರುಹಂಚಿಕೆ ಮಾಡಬೇಕು. ಶೇ 1ರ ಗುಂಪನ್ನು ಬಲಗೈಗೆ ಸೇರಿಸಬೇಕು’ ಎಂದು ಆಗ್ರಹಿಸಿದ್ದಾರೆ.

27.24 ಲಕ್ಷ ಕುಟುಂಬಗಳ 1.07 ಕೋಟಿ ಜನರನ್ನು ಸಮೀಕ್ಷೆ ಮಾಡಿ ಪರಿಶಿಷ್ಟರನ್ನು ಐದು ಗುಂಪುಗಳಾಗಿ ವಿಂಗಡಿಸಲಾಗಿದೆ. ಬಲಗೈ ಸಮುದಾಯಕ್ಕೆ ಸೇರಿದ ಕೆಲ ಜಾತಿಗಳನ್ನು ಎಡಗೈ ಗುಂಪಿಗೆ, ಕೆಲ ಜಾತಿಗಳನ್ನು ಅತ್ಯಂತ ಹಿಂದುಳಿದ ಜಾತಿಗಳ ಗುಂಪಿಗೆ ಸೇರಿಸಲಾಗಿದೆ. ಬಹುತೇಕ ಜನ ತಮ್ಮ ಜಾತಿ ಬಹಿರಂಗಪಡಿಸಲು ಹಿಂಜರಿದು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಎಂದು ಬರೆಯಿಸಿದ್ದಾರೆ. ಜಾತಿಯೇ ಅಲ್ಲದ ಅಂತಹ ಸಮೂಹಕ್ಕೆ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ ಎಂದು ದೂರಿದ್ದಾರೆ.

ಸಮೀಕ್ಷೆಯ ಆರಂಭದಿಂದಲೂ ಸಾಕಷ್ಟು ಗೊಂದಲಗಳಿದ್ದವು. ಗಣತಿದಾರರಿಗೆ ಟ್ಯಾಬ್ ನೀಡದ ಕಾರಣ ಅವರ ಮೊಬೈಲ್ಗಳಲ್ಲಿ ಆ್ಯಪ್ ಡೌನ್ಲೋಡ್ ಆಗದೆ ಸಮಸ್ಯೆಯಾಗಿತ್ತು. ಪಡಿತರ ಚೀಟಿಯಲ್ಲಿ ಹೆಸರು ಇಲ್ಲದವರನ್ನು ಸಮೀಕ್ಷೆಯಲ್ಲಿ ದಾಖಲಿಸಲಿಲ್ಲ. ನಂತರ ಆಧಾರ್ ಕಾರ್ಡ್ ಬಳಸಲಾಯಿತು. ಇದರಿಂದ 8 ಲಕ್ಷ ಮಕ್ಕಳು ಸಮೀಕ್ಷೆಯಿಂದ ಹೊರಗೆ ಉಳಿದರು. ಗಣತಿದಾರರಿಗೆ ಗುರುತಿನ ಚೀಟಿ ನೀಡಲಿಲ್ಲ. ಅವರ ಹೆಸರಿನಲ್ಲಿ ಬೇರೆಯವರು ಸಮೀಕ್ಷೆ ನಡೆಸಿದ್ದಾರೆ. ಕೆಲವರು ಮನೆಗಳಲ್ಲೇ ಕುಳಿತು ವಿವರ ದಾಖಲಿಸಿಕೊಂಡಿದ್ದಾರೆ. ಆಯೋಗ ಭರವಸೆ ನೀಡಿದಂತೆ ಸ್ಥಳೀಯ ಸಂಸ್ಥೆಗಳಲ್ಲಿ ಸಮೀಕ್ಷಾ ಬೂತ್ ತೆರೆಯಲಿಲ್ಲ. ಬೆಂಗಳೂರಿನಲ್ಲಿ ಮನೆಮನೆಗೆ ಭೇಟಿ ನೀಡದೇ ಇರುವುದರಿಂದ ಇಲ್ಲಿ ಶೇ 48ರಷ್ಟು ಸಮೀಕ್ಷೆಯಷ್ಟೇ ಸಾಧ್ಯವಾಗಿದೆ ಎಂದು ಹೇಳಿದ್ದಾರೆ.

ಜನಸಂಖ್ಯೆಯ ಬೆಳವಣಿಗೆ ದರವನ್ನು ಕಡಿಮೆ ಲೆಕ್ಕಹಾಕಲಾಗಿದೆ. 1.47 ಕೋಟಿ ಇರುವುದನ್ನು 1.16 ಕೋಟಿ ಎಂದು ತಪ್ಪಾಗಿ ನಮೂದಿಸಲಾಗಿದೆ. ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯವು 2011ರ ಜನಗಣತಿ ನಂತರ ಪ್ರತಿ ವರ್ಷದ ಜನಸಂಖ್ಯೆ ಬೆಳವಣಿಗೆಯ ದರವನ್ನು ಲೆಕ್ಕಹಾಕಿ ಜಾತಿಗಳ ಸಂಖ್ಯೆ ಲೆಕ್ಕಹಾಕಿದೆ. ಈ ಅಂಕಿಅಂಶಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ತಾಂತ್ರಿಕ ಕಾರಣಗಳಿಂದ ಹಲವರಿಗೆ ಸ್ವಯಂ ನೋಂದಣಿ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಬೇಡ ಜಂಗಮ ಉಲ್ಲೇಖದ ಬಗ್ಗೆಯೂ ಗೊಂದಲಗಳಿವೆ ಎಂದು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.