ನವದೆಹಲಿ: ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರನ್ನು ಇದೇ ತಿಂಗಳ 28 ರಿಂದ ಬೆಂಗಳೂರಿನಲ್ಲಿ ನಡೆಯುವ ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಉತ್ತರ ವಲಯ ತಂಡದ ನಾಯಕರನ್ನಾಗಿ ಹೆಸರಿಸಲಾಗಿದೆ.

ದೇಶಿ ಋತುವಿನ ಮೊದಲ ಟೂರ್ನಿಯಾಗಿರುವ ದುಲೀಪ್ ಟ್ರೋಫಿ ವಲಯ ಮಾದರಿಗೆ ಮರಳಿದೆ.

ಇತ್ತೀಚೆಗಷ್ಟೆ ಮುಕ್ತಾಯಗೊಂಡ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಭಾರತ ಯುವ ತಂಡವನ್ನು ಗಿಲ್ ಮುನ್ನಡೆಸಿದ್ದರು.

ಉತ್ತರ ವಲಯ ತಂಡವು ಆಗಸ್ಟ್ 28ರಂದು ತನ್ನ ಮೊದಲ ಪಂದ್ಯದಲ್ಲಿ ಪೂರ್ವ ವಲಯ ತಂಡವನ್ನು ಎದುರಿಸಲಿದೆ. ಫೈನಲ್ ಸೆಪ್ಟೆಂಬರ್ 11ರಂದು ನಿಗದಿಯಾಗಿದೆ. ಅದೇ ವೇಳೆಗೆ ಯುಎಇಯಲ್ಲಿ ಏಷ್ಯಾ ಕಪ್ ಟೂರ್ನಿ (ಸೆ. 10ರಿಂದ) ಸಹ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆ. 10ರಂದು ದುಬೈನಲ್ಲಿ ಯುಎಇ ವಿರುದ್ಧ ಆಡಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯ ಸೆ. 14ರಂದು ನಡೆಯಲಿದೆ.

ಗಿಲ್, ತಂಡದ ಇತರ ಆಟಗಾರರಾದ ಅರ್ಷದೀಪ್ ಮತ್ತು ಹರ್ಷಿತ್ ರಾಣಾ ಅವರು ಏಷ್ಯಾ ಕಪ್ ತಂಡಕ್ಕೆ ಆಯ್ಕೆಯಾದಲ್ಲಿ ಅವರಿಗೆ ಬ್ಯಾಕಪ್ ಆಗಿ ಶುಣಮನ್ ರೊಹಿಲ್ಲಾ, ಗುರ್ನೂರ್ ಬ್ರಾರ್ ಮತ್ತು ಅನುಲ್ ತಕ್ರಾಲ್ ಅವರನ್ನು ಹೆಸರಿಸಲಾಗಿದೆ.

ತಂಡ ಇಂತಿದೆ:

ಶುಭಮನ್ ಗಿಲ್ (ನಾಯಕ), ಅಂಕಿತ್ ಕುಮಾರ್, ಶುಭಂ ಖಜುರಿಯಾ, ಆಯುಷ್ ಬಡೋನಿ, ಯಶ್ ಧುಲ್, ಅಂಕಿತ್ ಖಾಲ್ಸಿ, ನಿಶಾಂತ್ ಸಿಂಧು, ಸಾಹಿಲ್ ಲೋತ್ರಾ, ಮಯಂಕ್ ಡಾಗರ್, ಯುಧವೀರ್ ಸಿಂಗ್ ಚರಕ್, ಅರ್ಷದೀಪ್ ಸಿಂಗ್, ಹರ್ಷಿತ್ ರಾಣಾ, ಅನ್ಷುಲ್ ಕಾಂಭೋಜ್, ಅಖಿಬ್ ನಬಿ, ಕನ್ಹೈಯಾ ವಾಧ್ವಾನ್ (ವಿಕೆಟ್ ಕೀಪರ್).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.