ಬೆಂಗಳೂರು: ಭಾರತೀಯ ರೈಲ್ವೆ ಮಂಡಳಿಯು ದೇಶದ ವಿವಿಧ 100 ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ದರ್ಜೆಯ (ಜಿಎಸ್) ಕೋಚ್‌ಗಳ ಬಳಿ ಕಡಿಮೆ ದರಲ್ಲಿ ಉತ್ತಮ ಆಹಾರ ನೀಡುವ ಕೌಂಟರ್‌ಗಳನ್ನು ತೆರೆದಿದೆ. ಅದರಲ್ಲಿ ರಾಜ್ಯದ ಏಳು ನಿಲ್ದಾಣಗಳು ಸೇರಿವೆ.

ದಕ್ಷಿಣ ರೈಲ್ವೆ ವ್ಯಾಪ್ತಿಯ ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣಗಳು, ನೈರುತ್ಯ ರೈಲ್ವೆ ವ್ಯಾಪ್ತಿಯ ಕೆಎಸ್ಆರ್ ಬೆಂಗಳೂರು, ಯಶವಂತಪುರ, ಮೈಸೂರು, ವಿಜಯಪುರ ಮತ್ತು ಬಳ್ಳಾರಿ ನಿಲ್ದಾಣಗಳಲ್ಲಿ ಕೌಂಟರ್ ತೆರೆಯಲಾಗಿದ್ದು, ಆಹಾರ ನೀಡಲಾಗುತ್ತಿದೆ.

ಇಂಡಿಯನ್ ರೈಲ್ವೇಸ್ ಕೇಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ (ಐಆರ್‌ಸಿಟಿಸಿ) ಮತ್ತು ಭಾರತೀಯ ರೈಲ್ವೆ ಜಂಟಿಯಾಗಿ ಈ ಕ್ರಮ ಕೈಗೊಂಡಿದ್ದು, ಕಾಯ್ದಿರಿಸದ ಬೋಗಿಗಳಲ್ಲಿ ಪ್ರಯಾಣಿಸುವವರಿಗೆ ಬೇಸಿಗೆ ಕಾಲದಲ್ಲಿ ಕೈಗೆಟುಕುವ ಬೆಲೆಯಲ್ಲಿ ಆರೋಗ್ಯಕರ ಊಟ ಮತ್ತು ತಿಂಡಿಗಳನ್ನು ನೀಡುವ ಹೊಸ ಉಪಕ್ರಮ ಇದಾಗಿದೆ.

‘ಜನತಾ ಊಟ’ ಎಂದು ನಿಲ್ದಾಣಗಳಲ್ಲಿ ಅಡುಗೆ ಮಳಿಗೆಗಳಲ್ಲಿ ಕಡಿಮೆ ದರದಲ್ಲಿ ಆಹಾರ ಒದಗಿಸಲಾಗಿತ್ತು. ಈಗ ಪ್ಲಾಟ್‌ಫಾರಂನಲ್ಲಿಯೇ ಕೌಂಟರ್ ತೆರೆಯಲಾಗಿದೆ. 100 ರೈಲ್ವೆ ನಿಲ್ದಾಣಗಳ 150 ಪ್ಲಾಟ್‌ಫಾರಂಗಳಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ₹20ಕ್ಕೆ ಉಪಾಹಾರ, ₹ 50ಕ್ಕೆ ಲಘು ಊಟ, ₹3ಕ್ಕೆ 200 ಎಂ.ಎಲ್. ನೀರು ನೀಡಲಾಗುತ್ತದೆ ಎಂದು ರೈಲ್ವೆ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.