ಬೆಂಗಳೂರು: 'ಹುಬ್ಬಳ್ಳಿ ಘಟನೆಗೆ ಸಂಬಂಧಿಸಿದಂತೆ ಎಲ್ಲರನ್ನೂ ಬಂಧಿಸಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ. ಇದರ ಹಿಂದೆ ಯಾರು ಇದ್ದಾರೆ, ಯಾವ ನಾಯಕರು ಇದ್ದಾರೆ,ಯಾರು ತಪ್ಪಿತಸ್ಥರಿದ್ದಾರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇವೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಸುದ್ದಿಗಾರರ ಜೊತೆ ಸೋಮವಾರ ಬೆಳಿಗ್ಗೆ ಅವರು ಮಾತನಾಡಿದರು.

ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ,'ಅಕ್ರಮ ನಡೆದ ಬಗ್ಗೆ ಹಲವು ದೂರುಗಳು ಬಂದಿದ್ದವು. ತಕ್ಷಣ ಗೃಹ ಸಚಿವರು ಸಿಐಡಿಗೆ ತನಿಖೆ ವಹಿಸಿದ್ದಾರೆ. ನಾವೇ ನಿಷ್ಪಕ್ಷಪಾತ ತನಿಖೆ ಆಗಬೇಕು ಎಂದು ಸಿಐಡಿಗೆ ಕೊಟ್ಟಿದ್ದೇವೆ. ಸಮಗ್ರವಾಗಿ ತನಿಖೆ ಮಾಡಲು ಆದೇಶ ಕೊಟ್ಟಿದ್ದೇನೆ. ಬೇರೆ ಸರ್ಕಾರವಾದರೆ ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದ್ದರು. ನಮ್ಮ ಗಮನಕ್ಕೆ ಬಂದ ತಕ್ಷಣ ಸಿಐಡಿಗೆ ಕೊಟ್ಟಿದ್ದೇವೆ. ಯಾರೇ ತಪಿತಸ್ಥರಿದ್ದರೂ ಅವರ ಮೇಲೆ ಕ್ರಮ ಕೈಗೊಳ್ಳುತ್ತೇವೆ' ಎಂದರು.

ಮತ್ತೆ ಪರೀಕ್ಷೆ ಮಾಡಿ ಎಂಬ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, 'ಸಿಐಡಿ ವರದಿ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ' ಎಂದರು.

ಸಂಪುಟ ಪುನರಚನೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, 'ದೆಹಲಿಗೆ ಹೋದ ನಂತರ ಸಭೆ ಮಾಡಿ ತಿಳಿಸುತ್ತೇವೆಂದು ನಡ್ಡಾ ಹೇಳಿದ್ದಾರೆ. ಅ ಮೇಲೆ ನೀವು ಬನ್ನಿ ಎಂದು ಹೇಳಿದ್ದಾರೆ' ಎಂದರು.

ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬ ಪ್ರಶ್ನೆಗೆ'ಎಲ್ಲವೂ ಅಲ್ಲಿ (ದೆಹಲಿಯಲ್ಲಿ) ತೀರ್ಮಾನವಾಗುತ್ತದೆ' ಎಂದರು.

ಇವನ್ನೂ ಓದಿ
*ಹುಬ್ಬಳ್ಳಿ ಗಲಭೆ: ವಾಟ್ಸ್ಆ್ಯಪ್ ಸ್ಟೇಟಸ್ನಲ್ಲಿ ಏನಿತ್ತು?
*ಹುಬ್ಬಳ್ಳಿ ಗಲಭೆ: ಪೊಲೀಸ್ ಕಟ್ಟೆಚ್ಚರ- 89 ಮಂದಿ ಬಂಧನ
*ಜಹಾಂಗಿರ್ಪುರಿ ಹಿಂಸಾಚಾರ: 20 ಜನರ ಬಂಧನ, ಪೊಲೀಸರಿಂದ ಶಾಂತಿಸಭೆ
*ಉತ್ತರಾಖಂಡ, ಆಂಧ್ರದಲ್ಲೂ ಹನುಮ ಜಯಂತಿ ಮೆರವಣಿಗೆ ಮೇಲೆ ಕಲ್ಲು ತೂರಾಟ
*ಕೋಮುಗಲಭೆಗೆ ಕಾರಣವಾದ ರಸ್ತೆ ಅಪಘಾತ; ಗುಜರಾತ್ನ ವಡೋದರದಲ್ಲಿ 19 ಜನರ ಬಂಧನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.