ಬೆಳಗಾವಿಯಲ್ಲಿ 1924ರಲ್ಲಿ ಮಹಾತ್ಮ ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ನೆನಪಿಗೆ ಈಗ ನೂರು ವರ್ಷ. ಕಾಂಗ್ರೆಸ್ ಪಕ್ಷ ಸಾಗಿ ಬಂದ ದಾರಿಯ ಹಿನ್ನೋಟ ಮತ್ತು ಕ್ರಮಿಸಬೇಕಾಗಿರುವ ದಾರಿ ಕಡೆ ಮುನ್ನೋಟವನ್ನು ಹರಿಸುವ ಹೊತ್ತೂ ಹೌದು.

ಆಧುನಿಕ ಭಾರತದ ಇತಿಹಾಸವೆಂದರೆ ಅದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಇತಿಹಾಸವೇ ಆಗಿದೆ. ಅದು ಸ್ವಾತಂತ್ರ್ಯ ಪೂರ್ವದಲ್ಲಿ ದೇಶ ಉಳಿಸಿದ ಹೋರಾಟದ ಇತಿಹಾಸವೂ ಹೌದು, ಸ್ವಾತಂತ್ರ್ಯಾನಂತರದ ದೇಶ ಕಟ್ಟಿದ ಇತಿಹಾಸವೂ ಹೌದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎನ್ನುವುದು ಕೇವಲ ರಾಜಕೀಯ ಪಕ್ಷ ಅಲ್ಲ. ಅದೊಂದು ಚಳವಳಿ ಮತ್ತು ಸಿದ್ಧಾಂತ. ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯ ಬ್ರಿಟಿಷರ ದಯಾಭಿಕ್ಷೆ ಅಲ್ಲ; ಅದು ನಿರಾಯಾಸವಾಗಿ ಪ್ರಾಪ್ತಿಯಾದುದೂ ಅಲ್ಲ. ಕಾಂಗ್ರೆಸ್ ಪಕ್ಷದ ಸುದೀರ್ಘ ಹೋರಾಟ, ಧೀರ ಹೋರಾಟಗಾರರು ಹರಿಸಿದ ರಕ್ತ, ಬೆವರಿನ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.

ಗಾಂಧೀಜಿಯವರಿಂದ ತಾಯಿಯ ಹೃದಯವನ್ನು, ಅಂಬೇಡ್ಕರ್ ಅವರಿಂದ ಸಮಾನತೆಯ ಪಾಠವನ್ನು, ನೆಹರೂ ಅವರಿಂದ ವೈಚಾರಿಕ ಸ್ಪಷ್ಟತೆಯನ್ನೂ, ಪಟೇಲರಿಂದ ಉಕ್ಕಿನ ಸ್ಥೈರ್ಯವನ್ನೂ ಪಡೆದ ಪಕ್ಷವು ಸ್ವಾತಂತ್ರ್ಯ ಸಂಗ್ರಾಮದ ಗುರಿ ಈಡೇರಿಕೆಯಲ್ಲಿ ಯಶಸ್ವಿಯಾಯಿತು. ಸ್ವಾತಂತ್ರ್ಯ ಹೋರಾಟಕ್ಕೆ ಕಾಂಗ್ರೆಸ್ ನೇತೃತ್ವ, ಗಾಂಧೀಜಿಯವರಂತಹ ಆದರ್ಶ ನಾಯಕರ ಮಾರ್ಗದರ್ಶನ ಸಿಗದೆ ಹೋಗಿದ್ದರೆ ಭಾರತ ಇಂದು ಕೂಡಾ ಬ್ರಿಟಿಷರ ಗುಲಾಮಗಿರಿಗೆ ಸಿಕ್ಕಿ ನರಳಾಡುತ್ತಿತ್ತು. ಸ್ವತಂತ್ರ ಭಾರತದ ನಾಯಕತ್ವವನ್ನು ಕಾಂಗ್ರೆಸ್ ವಹಿಸದೆ ಹೋಗಿದ್ದರೆ ದೇಶ ಈ ಮಟ್ಟದ ಪ್ರಗತಿಯನ್ನು ಕಾಣಲು ಸಾಧ್ಯವೇ ಇರಲಿಲ್ಲ.

ಮೊದಲ ಆರು ದಶಕಗಳನ್ನು ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ಶ್ರಮಿಸಿದ ಕಾಂಗ್ರೆಸ್ ನಂತರದ ದಿನಗಳಲ್ಲಿ ಬಲಿಷ್ಠ, ಸಮೃದ್ಧ ಭಾರತದ ನಿರ್ಮಾಣದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ. ಭಾರತದ ವಿಕಾಸದಲ್ಲಿ ನೆಹರೂ ಅವರ ಮುನ್ನೋಟದ ಪಾತ್ರ ನಿರ್ಣಾಯಕವಾಗಿತ್ತು. ತನ್ನ ರಾಜಕೀಯ ಬದುಕಿನುದ್ದಕ್ಕೂ ನೆಹರೂ ಅವರು ಸಾಂಪ್ರದಾಯಿಕ ಶಕ್ತಿಗಳು, ವಿಚ್ಛಿದ್ರಕಾರಿ ಧೋರಣೆ ಮತ್ತು ಕೋಮುವಾದಿ ಭಾವನೆಗಳ ವಿರುದ್ಧ ಖಚಿತವಾದ ನಿಲುವು ಹೊಂದಿದ್ದರು. ಆರ್ಥಿಕ ಅಭಿವೃದ್ದಿ ಮತ್ತು ಸಾಮಾಜಿಕ ಸುಧಾರಣೆ ಜತೆ ಜತೆಯಲ್ಲಿಯೇ ಸಾಗಬೇಕೆಂದು ಅವರು ಬಯಸಿ, ಭಾರತಕ್ಕೆ ತನ್ನದೇ ಆದ ಅಭಿವೃದ್ದಿಯ ಭಾಷೆಯನ್ನು ಕೊಟ್ಟರು.

ದೇಶ ಒಡೆಯುವವರು, ಮನುಷ್ಯರ ನಡುವೆ ದ್ವೇಷ ಬಿತ್ತುವವರು ಇಂದಿನಂತೆ ಅಂದು ಕೂಡಾ ಇದ್ದರು. ದೇಶ ಕಟ್ಟಿದ, ಮನುಷ್ಯನ ಎದೆಯಲ್ಲಿ ಪ್ರೀತಿ, ಶಾಂತಿ, ಸೌಹಾರ್ದತೆಯನ್ನು ಬಿತ್ತಿದ ಪಕ್ಷ ಕಾಂಗ್ರೆಸ್. ದೇಶ ವಿಭಜನೆ ಮತ್ತು ಅದರ ಬೆನ್ನಿಗೇ ಭುಗಿಲೆದ್ದ ಕೋಮುದಂಗೆ ಸ್ವಾತಂತ್ರ್ಯಾನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಮುಂದಿನ ಪ್ರಮುಖ ಸವಾಲಾಗಿತ್ತು. ಈ ಸಂಘರ್ಷದಲ್ಲಿಯೇ ಕಾಂಗ್ರೆಸ್ ಪಕ್ಷದ ಆತ್ಮದಂತಿದ್ದ ಮಹಾತ್ಮ ಗಾಂಧೀಜಿಯವರನ್ನು ಕೋಮುವಾದಿಗಳು ಬಲಿ ತೆಗೆದುಕೊಂಡರು.

ಹಿಂಸೆಯನ್ನು ಶಾಂತಿಯಿಂದ, ಕೋಮುವಾದವನ್ನು ಜಾತ್ಯತೀತ ನಿಲುವಿನಿಂದ ಎದುರಿಸಿ ಯಶಸ್ವಿಯಾದವರು ಮೊದಲ ಪ್ರಧಾನಿ ನೆಹರೂ ಅವರು. ದೇಶದ ಎಲ್ಲ ನಾಗರಿಕರಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯವನ್ನು, ಅಭಿವ್ಯಕ್ತಿ, ಆರಾಧನೆಯ ಸ್ವಾತಂತ್ರ್ಯವನ್ನು ಖಾತರಿಪಡಿಸಿ, ಪರಸ್ಪರ ಭ್ರಾತೃತ್ವವನ್ನು ಉದ್ದೀಪನಗೊಳಿಸುವ ಸಂವಿಧಾನ ರಚನೆಗೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಒತ್ತಾಸೆಯಾಗಿ ನಿಂತದ್ದು ಕೂಡಾ ಕಾಂಗ್ರೆಸ್ ಪಕ್ಷ.

ನೆಹರೂ ಅವರು ಬೃಹತ್ ಅಣೆಕಟ್ಟುಗಳ ನಿರ್ಮಾಣದ ಮೂಲಕ ಕೃಷಿ, ನೀರಾವರಿ ಕ್ಷೇತ್ರಕ್ಕೆ ನೀಡಿದ ಒತ್ತು, ಕೈಗಾರಿಕೀಕರಣಕ್ಕೆ ನೀಡಿದ ಬೆಂಬಲ ಮುಂದಿನ ದಿನಗಳ ದೇಶದ ಅಭಿವೃದ್ದಿ ಪಥವನ್ನು ನಿರ್ದೇಶಿಸಿತು. ಅಭಿವೃದ್ದಿಗೆ ಮತ್ತಷ್ಟು ವೇಗ ಸಿಕ್ಕಿದ್ದು ಇಂದಿರಾಗಾಂಧಿಯವರ ಆಡಳಿತದಲ್ಲಿ. ಗರೀಬಿ ಹಠಾವೋ, ಹಸಿರು ಕ್ರಾಂತಿ, ಬ್ಯಾಂಕುಗಳ ರಾಷ್ಟ್ರೀಕರಣ, ಇಪ್ಪತ್ತು ಅಂಶಗಳ ಕಾರ್ಯಕ್ರಮಗಳು ಮೊದಲಾದ ಜನಪರ ಯೋಜನೆಗಳ ಮೂಲಕ ಇಂದಿರಾ ಅವರು ಬಡತನದ ವಿರುದ್ಧ ಹೋರಾಟವನ್ನೇ ನಡೆಸಿದ್ದರು.

ಯುದ್ಧದಲ್ಲಿ ಪಾಕಿಸ್ತಾನವನ್ನು ಮಣಿಸಿದ ಇಂದಿರಾಗಾಂಧಿಯವರು ಅಟಲ್ ಬಿಹಾರಿ ವಾಜಪೇಯಿ ಅಂತಹವರಿಂದಲೇ ‘ದುರ್ಗಿ’ ಎಂಬ ಶ್ಲಾಘನೆಗೆ ಪಾತ್ರರಾದವರು. ಭಯೋತ್ಪಾದನೆಯ ವಿರುದ್ಧ ನಿರ್ಭೀತಿಯ ನೇರಾನೇರ ಸಮರ ನಡೆಸಿದ್ದ ಇಂದಿರಾಗಾಂಧಿ ಅವರು ದೇಶದ ಏಕತೆ-ಸಮಗ್ರತೆಯನ್ನು ಕಾಪಾಡಲು ಪ್ರಾಣವನ್ನೇ ಬಲಿಕೊಡಬೇಕಾಗಿ ಬಂದದ್ದು ದುರಂತ.

21ನೇ ಶತಮಾನಕ್ಕೆ ಭಾರತವನ್ನು ಒಯ್ಯಬೇಕೆಂಬ ಕನಸು ಕಂಡ ರಾಜೀವ್ ಗಾಂಧಿಯವರು ಯುವಭಾರತ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದರು. ಮತದಾನದ ವಯಸ್ಸನ್ನು ಹದಿನೆಂಟಕ್ಕೆ ಇಳಿಸಿ ಯುವಜನರನ್ನು ಸಂಸದೀಯ ಪ್ರಜಾಪ್ರಭುತ್ವದಲ್ಲಿ ಪಾಲ್ಗೊಳ್ಳುವಂತೆ ಮಾಡಿದರು. ಅವರೂ ದೇಶಕ್ಕಾಗಿ ಪ್ರಾಣತ್ಯಾಗ ಮಾಡಬೇಕಾಯಿತು. ಅಮ್ಮ-ಮಗ ತಮ್ಮ ರಕ್ತ ಬಸಿದು, ಪ್ರಾಣ ತೆತ್ತು ಕಟ್ಟಿದ ಪಕ್ಷವೇ ಕಾಂಗ್ರೆಸ್. ಅವರು ಪ್ರಾಣ ಕಳೆದುಕೊಂಡು, ದೇಶ ಉಳಿಸಿದರು. ಇಂದು ನಮಗೆ ದೇಶಪ್ರೇಮದ ಪಾಠ ಮಾಡುತ್ತಿರುವ ಪಕ್ಷದ ಯಾವ ನಾಯಕರು ದೇಶಕ್ಕಾಗಿ ತ್ಯಾಗ ಮಾಡಿದ್ದಾರೆ?

ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ, ಆಹಾರ ಭದ್ರತಾ ಕಾಯಿದೆ, ಶಿಕ್ಷಣ ಹಕ್ಕು ಕಾಯಿದೆ, ಮಾಹಿತಿ ಹಕ್ಕು ಕಾಯಿದೆಗಳು ಸಮತೋಲನದ ಅಭಿವೃದ್ಧಿಯ ಸಾಧನೆಗೆ ಕಾರಣವಾಗಿವೆ. ಜನತೆಯ ಕೈಗೆ ಹಕ್ಕುಗಳನ್ನು ನೀಡುವ ಈ ಕಾಯಿದೆಗಳ ಹಿಂದಿನ ರೂವಾರಿ ಅಂದು ರಾಷ್ಟ್ರೀಯ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ಸೋನಿಯಗಾಂಧಿಯವರು.

ಕರ್ನಾಟಕದಲ್ಲಿಯೂ ದೇವರಾಜ ಅರಸು ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರವು ಬಡವರು, ದಲಿತರು, ಹಿಂದುಳಿದವರು, ರೈತರ ಪರವಾದ ದೇಶಕ್ಕೆ ಮಾದರಿಯೆನಿಸುವ ಹಲವು ಕ್ರಾಂತಿಕಾರಿ ಯೋಜನೆಗಳನ್ನು ಜಾರಿಗೊಳಿಸಿತು. ನಮ್ಮ ಸರ್ಕಾರವೂ ಕಾಂಗ್ರೆಸ್ನ ಪರಂಪರೆಯ ಹಾದಿಯಲ್ಲಿ ಹೆಜ್ಜೆಯಿಟ್ಟು ಮುಂದೆ ಸಾಗುತ್ತಿದೆ. ಕರ್ನಾಟಕದ ನಮ್ಮ ಹಿಂದಿನ ಸರ್ಕಾರದ ಅನ್ನಭಾಗ್ಯ, ಕ್ಷೀರಭಾಗ್ಯ, ಕೃಷಿಭಾಗ್ಯ, ಮಾತೃಪೂರ್ಣ, ವಿದ್ಯಾಸಿರಿ, ಸಹಕಾರಿ ಬ್ಯಾಂಕುಗಳ ಕೃಷಿ ಸಾಲಮನ್ನಾ ಮುಂತಾದ ಹಲವು ಕಾರ್ಯಕ್ರಮಗಳು ಕಲ್ಯಾಣ ರಾಜ್ಯದ ನಿರ್ಮಾಣದ ಕನಸನ್ನು ನನಸಾಗಿಸುವಲ್ಲಿ ಮಹತ್ವದ ಕೊಡುಗೆ ನೀಡಿವೆ. ನಮ್ಮ ಈಗಿನ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ.

ಕಾಂಗ್ರೆಸ್ ಪಕ್ಷದ ಹಿರಿಯರು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಸೌಹಾರ್ದ ಭಾರತವನ್ನು ಜಾತಿ-ಧರ್ಮಗಳ ಹೆಸರಲ್ಲಿ ಒಡೆದುಹಾಕಲಾಗುತ್ತಿದೆ. ಸಂವಿಧಾನವನ್ನೇ ಪ್ರಶ್ನಿಸಲಾಗುತ್ತಿದೆ. ಪ್ರಭುತ್ವವನ್ನು ಪ್ರಶ್ನಿಸುವವರ ದಮನ ಮಾಡಲಾಗುತ್ತಿದೆ. ಗಾಂಧಿಯವರನ್ನು ಕೊಂದವರು ಇಂದು ಗೋಡ್ಸೆಯನ್ನು ಮೆರೆಸುತ್ತಿದ್ದಾರೆ.

ದೇಶದ ಏಕತೆ–ಸಮಗ್ರತೆಯನ್ನು ಉಳಿಸಲು, ಸಂಪತ್ತಿನ ಲೂಟಿಯನ್ನು ತಡೆಯಲು, ಸಂವಿಧಾನವನ್ನು ಕಾಪಾಡಲು, ಕಾಂಗ್ರೆಸ್ ಪಕ್ಷವು ತ್ಯಾಗ-ಬಲಿದಾನಗಳ ಮೂಲಕ ಕಟ್ಟಿದ ಭಾರತವನ್ನು ಉಳಿಸಲು ಕಾಂಗ್ರೆಸ್ ಪಕ್ಷವೇ ಎರಡನೇ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾಗಬೇಕಾಗಿದೆ. ಈ ಹೋರಾಟಕ್ಕೆ ಗಾಂಧಿ ಚಿಂತನೆಗಳೇ ನಮಗೆ ದಾರಿ ದೀಪವಾಗಬೇಕು.

ಲೇಖಕ: ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.