‘ಪ್ರಜಾಪ್ರಭುತ್ವದಲ್ಲಿ ಸದನಕ್ಕೆ ಮಹತ್ವದ ಸ್ಥಾನವಿದೆ. ಆದರೆ ಈಚಿನ ದಿನಗಳಲ್ಲಿ ಸದನದ ಗೌರವ ಕುಗ್ಗುತ್ತಿದೆ. ರಾಜಕೀಯ ಆರೋಪ–ಪ್ರತ್ಯಾರೋಪಗಳಿಗೆ ಸದನ ಸೀಮಿತವಾಗುತ್ತಿದೆ’ ಎಂದು ಓಂ ಬಿರ್ಲಾ ಬೇಸರ ವ್ಯಕ್ತಪಡಿಸಿದರು. ‘ಸದನದ ಗೌರವವನ್ನು ಉಳಿಸಿಕೊಳ್ಳುವ ಹೊಣೆಗಾರಿಕೆ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೂ ಇದೆ’ ಎಂದರು.