ಬೆಂಗಳೂರು: ಸುರಂಗ ರಸ್ತೆ ಯೋಜನೆ ಸಂಬಂಧ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, 'ಇದರಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಹೈಕಮಾಂಡ್ ಕಮಿಷನ್ ಪಾಲು ಎಷ್ಟು' ಎಂದು ಪ್ರಶ್ನಿಸಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಅಶೋಕ, 'ಇಷ್ಟೆಲ್ಲ ಬಾಧಕಗಳಿರುವ ಸುರಂಗ ರಸ್ತೆಯನ್ನು ಮಾಡಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಯಾಕೆ ಬಿದ್ದಿದ್ದೀರಿ' ಎಂದು ಡಿಕೆಶಿ ಅವರನ್ನು ಕೇಳಿದ್ದಾರೆ.

'ಐಐಎಸ್ಸಿ ಅಧ್ಯಯನ ವರದಿ, ವಿಜ್ಞಾನಿಗಳು, ಪರಿಸರ ತಜ್ಞರು, ಪರಿಸರವಾದಿಗಳು, ನಾಗರಿಕರು ಎಷ್ಟೇ ವಿರೋಧ ಮಾಡುತ್ತಿದ್ದರೂ ಸುರಂಗ ರಸ್ತೆ ಬಗ್ಗೆ ನಿಮಗೆ ಅಷ್ಟು ಅಚಲ ಆಸಕ್ತಿ ಯಾಕೆ? ಸುರಂಗ ರಸ್ತೆಗೂ ನಿಮ್ಮ ಮುಖ್ಯಮಂತ್ರಿ ಹುದ್ದೆ ಕನಸಿಗೂ ಸಂಬಂಧವಿದೆಯಾ?' ಎಂದು ಪ್ರಶ್ನಿಸಿದ್ದಾರೆ.

'ವೈಯಕ್ತಿಕ ಪ್ರತಿಷ್ಠೆ, ಹಠಕ್ಕಾಗಿ ಬೆಂಗಳೂರಿನ ಪರಿಸರಕ್ಕೆ ದೀರ್ಘಕಾಲೀನ ಅಪಾಯ ತಂದೊಡ್ಡುವ ಅವೈಜ್ಞಾನಿಕ ಯೋಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಈ ರೀತಿ ಯೋಜನೆಯನ್ನು ಹೇರಿ ಬೆಂಗಳೂರಿನ ವಿಲನ್ ಆಗಬೇಡಿ' ಎಂದು ಹೇಳಿದ್ದಾರೆ.

'ಸುರಂಗ ರಸ್ತೆ ಯೋಜನೆಯಿಂದ ಜಲಮೂಲ, ಅಂತರ್ಜಲ, ಕೊಳವೆ ಬಾವಿಗೆ ಧಕ್ಕೆಯಾಗಲಿದೆ. ನಗರದ ಪರಿಸರಕ್ಕೆ ದೊಡ್ಡಮಟ್ಟದ ಹೊಡೆತ ಬೀಳಲಿದೆ. ಲಾಲ್ಬಾಗ್, ಕಬ್ಬನ್ ಪಾರ್ಕ್ನಂತಹ ನಗರದ ಶ್ವಾಸಕೋಶಗಳಿಗೆ ಹಾನಿಯಾಗಲಿದೆ. ಟ್ರಾಫಿಕ್ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಅಲ್ಲ' ಎಂದು ಅಶೋಕ ಅವರು ಉಲ್ಲೇಖಿಸಿದ್ದಾರೆ.
.ಸುರಂಗ ರಸ್ತೆ | ದೇವರಿಂದ ಮಾತ್ರ ನನ್ನನ್ನು ತಡೆಯಲು ಸಾಧ್ಯ: ಡಿ.ಕೆ. ಶಿವಕುಮಾರ್.ಸುರಂಗ ರಸ್ತೆ | ಕರ್ತವ್ಯ ನಿರ್ವಹಿಸುವೆ: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.