ಬೆಳಗಾವಿ: ಇಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಅಧಿವೇಶನದ ಭೂಪಟದಲ್ಲಿ ಭಾರತದ ನಕ್ಷೆ ತಪ್ಪಾಗಿ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಚಿತ್ರ ಸಮೇತ ಪೋಸ್ಟ್ ಮಾಡಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, 'ಭಾರತದ ಭೂಪಟಕ್ಕೆ ಅಪಚಾರವೆಸಗಿ ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ಪ್ರದರ್ಶಿಸುವ ಮೂಲಕ ರಾಷ್ಟ್ರದ್ರೋಹ, ಗಾಂಧಿದ್ರೋಹ ಎರಡನ್ನು ಎಸಗಿರುವ ಕಾಂಗ್ರೆಸಿಗರು ಈ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು' ಎಂದು ಒತ್ತಾಯಿಸಿದ್ದಾರೆ.

'ಸ್ವಾತಂತ್ರ್ಯಕ್ಕಾಗಿ ಅಸ್ತಿತ್ವ ಕಂಡುಕೊಂಡಿದ್ದ ಅಂದಿನ ಕಾಂಗ್ರೆಸ್ ಅನ್ನು ರಾಜಕೀಯ ಅಧಿಕಾರಕ್ಕಾಗಿ ಅಪೋಶನ ಮಾಡಿಕೊಂಡ ಕುಟುಂಬದ ಮುಷ್ಠಿಯಲ್ಲಿರುವ ಇಂದಿನ ಕಾಂಗ್ರೆಸ್, ಇಂದು ನಡೆಸುತ್ತಿರುವ ಬೆಳಗಾವಿ ಸಮಾವೇಶದ ಶತಮಾನದ ನೆನಪು ಕೇವಲ ರಾಜಕೀಯ ಹಿತಾಸಕ್ತಿಗಾಗಿ ಎಂಬುದು ದೇಶದ ಜನತೆಗೆ ತಿಳಿದಿದೆ' ಎಂದು ಅವರು ಟೀಕಿಸಿದ್ದಾರೆ.

'ಭಾರತದ ಕಿರೀಟ ಕಾಶ್ಮೀರಕ್ಕೆ ಕತ್ತರಿ ಪ್ರಯೋಗಿಸಿ ಮಹಾತ್ಮನನ್ನು ಸ್ಮರಿಸಲು ಹೊರಟಿರುವುದು ಮಹಾತ್ಮನ ಆತ್ಮಕ್ಕೆ ಇರಿದಂತೆ ಅಲ್ಲವೇ? ಅಖಂಡ ಭಾರತದ ಅಸ್ತಿತ್ವ ಹಾಗೂ ರಾಷ್ಟ್ರ ವಿಭಜನೆಯನ್ನು ತಡೆಯಲು ಕಡೇ ಕ್ಷಣದವರೆಗೂ ಪ್ರಯತ್ನಿಸಿದ ಗಾಂಧಿಯವರನ್ನು ಅಪಮಾನಿಸಲು ಹೊರಟಿರುವ ಬೆಳಗಾವಿಯ ಕಾಂಗ್ರೆಸ್ ಅಧಿವೇಶನದ ಶತಮಾನದ ನೆನಪಿನ ಕಾರ್ಯಕ್ರಮ, ದೇಶಪ್ರೇಮವನ್ನು ಮೆರೆಯಲೋ, ಅಥವಾ ರಾಷ್ಟ್ರವಿದ್ರೋಹಿ ಶಕ್ತಿಗಳನ್ನು ಓಲೈಸಲೋ? ಅಥವಾ ನಿಮ್ಮ ಮಿತ್ರರಾದ ಕಾಶ್ಮೀರಿ ಪ್ರತ್ಯೇಕತಾವಾದಿಗಳ ಓಲೈಕೆಗೋ ಎನ್ನುವುದನ್ನು ಕಾಂಗ್ರೆಸ್ಸಿಗರು ಸ್ಪಷ್ಟಪಡಿಸಬೇಕು' ಎಂದು ಹೇಳಿದ್ದಾರೆ.
.ಯಾವ ನೈತಿಕತೆಯಿಂದ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಆಚರಿಸುತ್ತಿದ್ದಾರೆ?: ಅಶೋಕ.ತಿರುಚಿದ ನಕ್ಷೆ ಬಳಸಿ, ದೇಶದ ಸಾರ್ವಭೌಮತೆಗೆ ಧಕ್ಕೆ ತಂದ ಕಾಂಗ್ರೆಸ್: ಬಿಜೆಪಿ ಕಿಡಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.