ನವದೆಹಲಿ: ಸಹಕಾರ ಕ್ಲೇತ್ರದ ಕೈಗಾರಿಕಾ ಉತ್ಪನ್ನಗಳಿಗೆ ತೆರಿಗೆ ಇಳಿಕೆ ಸೇರಿದಂತೆ ಹಲವು ಆರ್ಥಿಕ ರಿಯಾಯಿತಿಗಳನ್ನು ರಾಷ್ಟ್ರೀಯ ಸಹಕಾರ ನೀತಿ–2025 ಘೋಷಿಸಿದ್ದು, ಸಹಕಾರ ಕ್ಷೇತ್ರದ ವ್ಯಾಪ್ತಿಯನ್ನು ಹೊಸ ಕ್ಷೇತ್ರಗಳಿಗೆ ವಿಸ್ತರಿಸಲು ಭೂಮಿಕೆ ಸಿದ್ಧಪಡಿಸಿದೆ.

ಸಹಕಾರ ಸಚಿವ ಅಮಿತ್ ಶಾ ಅವರು ಬಿಡುಗಡೆ ಮಾಡಿದ ನೂತನ ರಾಷ್ಟ್ರೀಯ ಸಹಕಾರ ನೀತಿಯು, ‘ಪರಸ್ಪರ ಸಹಕಾರದಿಂದ ಆರ್ಥಿಕ ಸಮೃದ್ಧಿ ಖಚಿತ’ ಎಂಬ ತತ್ವವನ್ನು ಒಳಗೊಂಡಿದ್ದು, ಗ್ರಾಮೀಣ ಜನರು, ರೈತರು, ಮಹಿಳೆಯರು, ದಲಿತ, ಆದಿವಾಸಿಗಳ ಬದುಕನ್ನು ಸಹಕಾರ ತತ್ವಗಳ ಮೂಲಕ ಹಸನುಗೊಳಿಸುವ ಧ್ಯೇಯವನ್ನು ಒಳಗೊಂಡಿದೆ.

ಮೊಲಾಸಿಸ್ (ಕಾಕಂಬಿ) ಸೇರಿದಂತೆ ಕೈಗಾರಿಕಾ ಉತ್ಪನ್ನಗಳಿಗೆ ಶೇ 18ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಸಹಕಾರ ಸಂಘಗಳ ಮೂಲಕ ಸ್ಥಾಪಿತವಾದ ಕೈಗಾರಿಕೆಗಳ ಅದೇ ಉತ್ಪನ್ನಗಳಿಗೆ ಶೇ 5ರಷ್ಟು ಮಾತ್ರ ತೆರಿಗೆ ಹಾಕಲಾಗುತ್ತದೆ. ₹1 ಕೋಟಿಯಿಂದ ₹10 ಕೋಟಿಯವರೆಗೆ ಆದಾಯ ಗಳಿಸುವ ಸಹಕಾರ ಸಂಘಗಳಿಗೆ ವಿಧಿಸುತ್ತಿದ್ದ ಶೇ 12ರಷ್ಟು ಸರ್ಚಾರ್ಜ್ ಶೇ 7ಕ್ಕೆ ಇಳಿಸಲಾಗಿದೆ. ಕನಿಷ್ಠ ಪರ್ಯಾಯ ತೆರಿಗೆಯಲ್ಲೂ ಶೇ 3.5ರಷ್ಟು ಕಡಿತ ಮಾಡಲಾಗುತ್ತದೆ. ₹3 ಕೋಟಿವರೆಗಿನ ಆದಾಯಕ್ಕೆ ಶೂನ್ಯ ತೆರಿಗೆ ನಿಗದಿ ಮಾಡಲಾಗಿದೆ.

ಸಣ್ಣ ಸಹಕಾರ ಸಂಘಗಳೂ ಸೇರಿದಂತೆ ದೇಶದ ಎಲ್ಲ ಸಹಕಾರ ಸಂಘಗಳ ಆಡಳಿತವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸುವುದು. ಕೃತಕ ಬುದ್ಧಿಮತ್ತೆ ಸೇರಿದಂತೆ ಆಧುನಿಕ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಂಡು ವ್ಯವಹಾರ, ನಿರ್ವಹಣೆಯನ್ನು ಸುಗಮಗೊಳಿಸುವುದು. ವೃತ್ತಿಪರ ನಿರ್ವಹಣೆ, ಪಾರದರ್ಶಕತೆ ತರುವುದು, ಸಹಕಾರಿ ಸಂಸ್ಥೆಗಳ ದೀರ್ಘಕಾಲೀನ ಸುಸ್ಥಿರತೆ ಮತ್ತು ಬೆಳವಣಿಗೆಯನ್ನು ಉತ್ತೇಜಿಸುವ ಆಶಯವನ್ನು ಹೊಸ ನೀತಿಯು ಒಳಗೊಂಡಿದೆ.

ಕೇಂದ್ರದ ಮಾಜಿ ಸಚಿವ ಸುರೇಶ್ ಪ್ರಭು ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ 48 ಸದಸ್ಯರನ್ನು ಒಳಗೊಂಡ ರಾಷ್ಟ್ರಮಟ್ಟದ ಸಮಿತಿ ರಾಷ್ಟ್ರೀಯ ಸಹಕಾರ ನೀತಿ–2025ನ್ನು ಸಿದ್ಧಪಡಿಸಿದ್ದು, 2047ರವರೆಗೆ ಇದೇ ನೀತಿ ಮುಂದುವರಿಯಲಿದೆ. 2026ರ ಗಣರಾಜ್ಯೋತ್ಸವದ ವೇಳೆಗೆ ಎಲ್ಲ ರಾಜ್ಯಗಳೂ ಹೊಸ ನೀತಿಗಳನ್ನು ಅಳವಡಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಪ್ರಮುಖ ಅಂಶಗಳು ಕೃಷಿ ಉತ್ಪನ್ನಗಳ ರಫ್ತು ನಿರ್ವಹಣೆಗೆ ಮೂರು ಅಂತರರಾಜ್ಯ ಸಹಕಾರ ಸಂಘಗಳ ಸ್ಥಾಪನೆ ಪ್ರಾಥಮಿಕ ಸಹಕಾರ ಸಂಘಗಳ ರಾಷ್ಟ್ರವ್ಯಾಪಿ ವಹಿವಾಟಿಗೆ ‘ಬ್ಯಾಂಕ್ ಮಿತ್ರ’ ಸಹಕಾರ ಬ್ಯಾಂಕ್ ಸುಸ್ತಿದಾರ ಸಹಕಾರಿಗಳಿಗೆ ರಾಷ್ಟ್ರೀಯ ಬ್ಯಾಂಕ್ಗಳ ಮಾದರಿ ಒಟಿಎಸ್ ಸೌಲಭ್ಯ (ಏಕಗಂಟಿನ ತೀರುವಳಿ)

ಸಹಕಾರ ವಲಯವನ್ನು ಪ್ರವಾಸೋದ್ಯಮ ಟ್ಯಾಕ್ಸಿ ಸೇವೆಗಳು ವಿಮೆ ಹಸಿರು ಇಂಧನದಂತಹ ಕ್ಷೇತ್ರಗಳಿಗೂ ವಿಸ್ತರಿಸಲಾಗುವುದು. ಸಿಗುವ ಲಾಭವನ್ನು ಪ್ರಾಥಮಿಕ ಕೃಷಿ ಪತ್ತಿನ ಸಂಘಗಳಿಗೆ ಹಂಚಿಕೆ ಮಾಡಲಾಗುವುದು
ಅಮಿತ್ ಶಾ ಕೇಂದ್ರ ಸಹಕಾರ ಸಚಿವ

2 ಲಕ್ಷ ಹೊಸ ಕೃಷಿ ಪತ್ತಿನ ಸಹಕಾರ ಸಂಘಗಳು ಗ್ರಾಮೀಣ ಪ್ರದೇಶಗಳಲ್ಲಿ ಸಹಕಾರ ವ್ಯವಸ್ಥೆಯನ್ನು ಬಲಗೊಳಿಸಲು ರಾಷ್ಟ್ರೀಯ ಸಹಕಾರ ನೀತಿಯಲ್ಲಿ ಆದ್ಯತೆ ನೀಡಲಾಗಿದ್ದು 2026ರ ಮುಕ್ತಾಯದ ವೇಳೆಗೆ ಎರಡು ಲಕ್ಷ ಹೊಸ ಬಹೋಪಯೋಗಿ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ. ಒಂದು ಗ್ರಾಮ ಪಂಚಾಯಿತಿಗೆ ಕನಿಷ್ಠ ಒಂದು ಸಂಘ ಇರಬೇಕು ಎಂಬ ಷರತ್ತು ವಿಧಿಸಲಾಗಿದೆ. ಈ ಸಹಕಾರ ಸಂಘಗಳ ಮೂಲಕ ಸುಲಭ ಸಾಲ ವ್ಯವಸ್ಥೆ ಜತೆಗೆ ಜನರು ನಿತ್ಯದ ಹಣಕಾಸಿನ ವಹಿವಾಟನ್ನೂ ಸಂಘದ ಮೂಲಕವೇ ನಡೆಸುವಂತೆ ಪ್ರೇರೇಪಿಸಲಾಗುತ್ತದೆ. ರೈತರ ಕೃಷಿ ಆದಾಯವನ್ನು ದ್ವಿಗುಣಗೊಳಿಸುವುದು ಗುಡಿ ಕೈಗಾರಿಕೆಗಳು ಹಾಲು ಉತ್ಪಾದಕ ಮಂಡಳಿಗಳು ಮೀನುಗಾರಿಕೆ ಸಹಕಾರ ಸಂಘಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸುವುದು. ಸ್ಥಳೀಯ ಉತ್ಪನ್ನಗಳ ಉತ್ಪಾದನೆ ಮಾರಾಟ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು. ವಹಿವಾಟುಗಳಿಗೆ ಅಗತ್ಯವಾದ ಹಣಕಾಸಿನ ನೆರವನ್ನು ಪತ್ತಿನ ಸಂಘಗಳ ಮೂಲಕ ನೀಡುವುದು. ಐದು ವರ್ಷಗಳಲ್ಲಿ ದೇಶದ 50 ಕೋಟಿ ಜನರನ್ನು ಸಹಕಾರ ಕ್ಷೇತ್ರದ ವ್ಯಾಪ್ತಿಗೆ ತಂದು ರಾಷ್ಟ್ರದ ಆದಾಯಕ್ಕೆ ಈಗಿರುವ ಕೊಡುಗೆಯನ್ನು ಮೂರುಪಟ್ಟು ವಿಸ್ತರಿಸುವ ಗುರಿಯನ್ನು ಹೊಸ ನೀತಿಯು ಒಳಗೊಂಡಿದೆ.

2025ರ ನೀತಿಯ ಆರು ಧ್ಯೇಯಗಳು

lಅಡಿಪಾಯವನ್ನು ಬಲಪಡಿಸುವುದು

lಚೈತನ್ಯವನ್ನು ಉತ್ತೇಜಿಸುವುದು

lಭವಿಷ್ಯಕ್ಕಾಗಿ ಸಂಘಗಳನ್ನು ಸಿದ್ಧಪಡಿಸುವುದು

lಎಲ್ಲರ ಒಳಗೊಳ್ಳುವಿಕೆ ಖಾತ್ರಿಪಡಿಸುವುದು

lಹೊಸ ವಲಯಗಳಿಗೆ ವಿಸ್ತರಣೆ

lಸಹಕಾರ ಕ್ಷೇತ್ರಕ್ಕೆ ಯುವ ಪೀಳಿಗೆ ಆಕರ್ಷಣೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.