ಬೆಂಗಳೂರಿನಲ್ಲಿ ಲಕ್ಷ:ಬೆಂಗಳೂರಿನಲ್ಲಿ ಹೊಸದಾಗಿ 2,948 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಬಳ್ಳಾರಿಯಲ್ಲಿ ಮತ್ತೆ 540 ಮಂದಿ ಸೋಂಕಿತರಾಗಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 16,740ಕ್ಕೆ ಏರಿಕೆಯಾಗಿದೆ. ಬೆಳಗಾವಿಯಲ್ಲಿ 384, ಉಡುಪಿಯಲ್ಲಿ 278, ದಕ್ಷಿಣ ಕನ್ನಡದಲ್ಲಿ 202 ಹಾಗೂ ಕಲಬುರ್ಗಿಯಲ್ಲಿ 145 ಪ್ರಕರಣಗಳು ವರದಿಯಾಗಿದ್ದು, ಈ ಎಲ್ಲ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 10 ಸಾವಿರದ ಗಡಿಯತ್ತ ದಾಪುಗಾಲು ಇರಿಸಿದೆ. ಯಾದಗಿರಿ (255), ಧಾರವಾಡ (252), ದಾವಣಗೆರೆ (237), ಕೊಪ್ಪಳ (234), ಶಿವಮೊಗ್ಗ (227), ಹಾವೇರಿ (224), ಜಿಲ್ಲೆಯಲ್ಲಿಯೂ ಅಧಿಕ ಪ್ರಕರಣಗಳು ಹೊಸದಾಗಿ ವರದಿಯಾಗಿವೆ.