ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ದೃಢ ಪ್ರಮಾಣದ ಜತೆಗೆ ಕೋವಿಡ್ ಹೊಸ ಪ್ರಕರಣಗಳು ಕೂಡ ಇಳಿಕೆಯ ಹಾದಿ ಹಿಡಿದಿದೆ. ವಾರದಲ್ಲಿ ಸೋಂಕು ದೃಢ ಪ್ರಮಾಣದಸರಾಸರಿ ಶೇ 8.91ರಷ್ಟಿದ್ದು, ಬೆಂಗಳೂರು ನಗರ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಈ ಪ್ರಮಾಣವು ಶೇ 5ಕ್ಕಿಂತ ಕಡಿಮೆಯಿದೆ.

ರಾಜ್ಯದಲ್ಲಿ ಇದೇ 14ರವರೆಗೆ ಲಾಕ್‌ಡೌನ್ ವಿಸ್ತರಿಸಲಾಗಿದೆ. ಸೋಂಕು ದೃಢ ಪ್ರಮಾಣ ದರವು ಶೇ 5 ಹಾಗೂ ಮರಣ ಪ್ರಮಾಣ ದರವು ಶೇ 1ಕ್ಕೆ ಇಳಿಕೆಯಾಗುವವರೆಗೂ ಲಾಕ್‌ಡೌನ್ ಮುಂದುವರಿಸಬೇಕೆಂದು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಕಳೆದ ತಿಂಗಳು ಮೊದಲೆರಡು ವಾರ ರಾಜ್ಯದಲ್ಲಿ ಸೋಂಕು ದೃಢ ಪ್ರಮಾಣವು ಶೇ 50ರ ಗಡಿಯ ಆಸುಪಾಸಿಗೆ ಏರಿಕೆಯಾಗಿತ್ತು. ಬಳ್ಳಾರಿ, ಉತ್ತರ ಕನ್ನಡ, ಬೆಳಗಾವಿ, ಮೈಸೂರು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸೋಂಕು ದೃಢ ಪ್ರಮಾಣ ಅಧಿಕವಿತ್ತು. ವೈದ್ಯಕೀಯ ತಜ್ಞರ ಪ್ರಕಾರ ಈ ಪ್ರಮಾಣವು ಶೇ 5ಕ್ಕಿಂತ ಕಡಿಮೆ ವರದಿಯಾದಲ್ಲಿ ಮಾತ್ರ ರೋಗ ನಿಯಂತ್ರಣಕ್ಕೆ ಬಂದಿದೆ ಎಂದು ಪರಿಗಣಿಸಲಾಗುತ್ತದೆ.

ಶೇ 3ರ ಗಡಿಯ ಆಸುಪಾಸಿಗೆ ಏರಿಕೆಯಾಗಿದ್ದ ಮರಣ ಪ್ರಮಾಣ ದರ ಕೂಡ ಇಳಿಕೆಯಾಗುತ್ತಿದೆ. ಏಳು ದಿನಗಳಲ್ಲಿ ವರದಿಯಾದ ಮರಣ ಪ್ರಕರಣಗಳ ಪ್ರಕಾರ ರಾಜ್ಯದಲ್ಲಿ ಶೇ 2.67ರಷ್ಟು ಮರಣ ಪ್ರಮಾಣ ದರವಿದೆ. ಯಾದಗಿರಿ, ಉಡುಪಿ ಸೇರಿದಂತೆ 9 ಜಿಲ್ಲೆಗಳಲ್ಲಿ ಈ ಪ್ರಮಾಣವು ಶೇ 1ಕ್ಕಿಂತ ಕಡಿಮೆಯಿದೆ. ಬೆಂಗಳೂರು ಸೇರಿದಂತೆ ನಾಲ್ಕು ಜಿಲ್ಲೆಗಳಲ್ಲಿ ರಾಜ್ಯದ ಸರಾಸರಿಗಿಂತ ಅಧಿಕವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.