ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಸಲು ಕಟ್ಟಿದರೆ ಬಡ್ಡಿ ಮನ್ನಾ ಸೌಲಭ್ಯ: ಜೂನ್‌ವರೆಗೆ ದಿನಾಂಕ ವಿಸ್ತರಣೆ

Last Updated 27 ಮಾರ್ಚ್ 2020, 10:44 IST
ಅಕ್ಷರ ಗಾತ್ರ

ಬೆಂಗಳೂರು: ರೈತರು ಸಹಕಾರ ಸಂಘಗಳಿಂದ ಪಡೆದಿದ್ದ ಸಾಲದ ಮೇಲೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ ಸೌಲಭ್ಯ ಪಡೆಯಲು ಕಂತು ಪಾವತಿಗೆ ಇದ್ದ ಕೊನೆ ದಿನವನ್ನು(ಮಾರ್ಚ್‌ 31) ಜೂನ್‌ ಕೊನೆಯವರೆಗೆ ವಿಸ್ತರಿಸಲು ಸಚಿವ ಸಂಪುಟ ಸಭೆ ತೀರ್ಮಾನ ತೆಗೆದುಕೊಂಡಿದೆ.

ಕೊರೊನಾ ವೈರಸ್‌ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್‌ಡೌನ್‌ ಘೋಷಿಸಿರುವ ಕಾರಣ ಕಂತಿನ ಮರುಪಾವತಿಯನ್ನು ಮುಂದೂಡಲು ಅನೇಕ ಮನವಿ ಬಂದಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟ ಸಭೆಯ ಬಳಿಕ ತಿಳಿಸಿದರು. ಈ ಸಂಬಂಧ ಆದೇಶವನ್ನೂ ಹೊರಡಿಸಲಾಗಿದೆ.

ಪ್ರಮುಖ ತೀರ್ಮಾನಗಳು:

*ಮೈಸೂರು ಸಕ್ಕರೆ ಕಂಪನಿ (ಮೈಶುಗರ್‌) 40 ವರ್ಷಗಳಿಗೆ ಗುತ್ತಿಗೆ ಆಧಾರದಲ್ಲಿ ಲೀಸ್‌ ನೀಡಲು ತೀರ್ಮಾನ ಇದಕ್ಕಾಗಿ ತಕ್ಷಣವೇ ಇ–ಟೆಂಡರ್‌ ಕರೆಯಲಾಗುವುದು. ಇದೇ ಜೂನ್‌ನಿಂದ ಕಬ್ಬನ್ನು ಅರೆಯಬೇಕಾಗುತ್ತದೆ.

* ಕ್ರಷರ್ಸ್‌ ಮಸೂದೆ, ಗ್ರಾಮ ಸ್ವರಾಜ್‌ ಮಸೂದೆ ಮತ್ತು ಬಿಬಿಎಂಪಿ ಮಸೂದೆಗಳು ವಿಧಾನಮಂಡಲದಲ್ಲಿ ಒಪ್ಪಿಗೆ ಸಿಗದ ಕಾರಣ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನ.

*ಕೆಪಿಎಸ್‌ಸಿಯು ವಿವಿಧ ಇಲಾಖೆಗಳ ನೇಮಕಾತಿ ಸಂದರ್ಭದಲ್ಲಿ ಅಭ್ಯರ್ಥಿಗಳ ದಾಖಲೆ ಪತ್ರಗಳ ಪ್ರಾಥಮಿಕ ಪರಿಶೀಲನೆ ನಡೆಸಬೇಕು. ಸಮಗ್ರ ಪರಿಶೀಲನೆ ಅಧಿಕಾರ ಇನ್ನು ಮುಂದೆ ಆಯಾ ಇಲಾಖೆಯೇ ನಡೆಸುತ್ತದೆ.

* ಭೀಮ ಏತನೀರಾವರಿ ಯೋಜನೆಯಡಿ ಅಫಲಜ್‌ಪುರ ಸಮೀಪ 6 ಟಿಎಂಸಿ ಅಡಿ ನೀರೆತ್ತುವ ಏತ ನೀರಾವರಿ ಯೋಜನೆಗೆ ₹964 ಕೋಟಿ, ಬಂಡೂರ್‌ ನಾಲಾ ತಿರುವು ಯೋಜನೆಯ ಪರಿಷ್ಕೃತ ಅಂದಾಜು ವೆಚ್ಚ ₹791 ಕೋಟಿ, ಕಳಸಾ ನಾಲಾ ಯೋಜನೆಯಲ್ಲಿ ಖಾನಾಪುರ ಸಮೀಪ 3.56 ಟಿಎಂಸಿ ನೀರೆತ್ತುವ ಯೋಜನೆಗೆ ₹885.80 ಕೋಟಿಗೆ ಒಪ್ಪಿಗೆ

ಕೋವಿಡ್‌–19 ಜಿಲ್ಲಾ ಉಸ್ತುವಾರಿ ಸಚಿವರಿಗೇ ಜವಾಬ್ದಾರಿ:ವಿವಿಧ ಜಿಲ್ಲೆಗಳಲ್ಲಿ ಕೊರೊನಾ ವೈರಸ್‌ ಹರಡದಂತೆ ತಡೆಗಟ್ಟಲು ಸೂಕ್ತ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಜಿಲ್ಲಾ ಉಸ್ತುವಾರಿ ಸಚಿವರಿಗೇ ನೀಡಲಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT