ಮೈಸೂರು: ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್ಸಿ) ವರ್ತನೆಯು ಪಾಕಿಸ್ತಾನ್ ನ್ಯಾಷನಲ್ ಕಾಂಗ್ರೆಸ್ (ಪಿ.ಎನ್.ಸಿ) ರೀತಿ ಇದೆ. ರಾಹುಲ್ ಗಾಂಧಿ, ಸಿದ್ದರಾಮಯ್ಯರ ಹೇಳಿಕೆಗಳನ್ನೇ ಪಾಕಿಸ್ತಾನ ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ಬಳಸಿಕೊಳ್ಳುತ್ತಿದೆ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ದೂರಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ ಪಾಕಿಸ್ತಾನಿಯರಿಗೆ ಅವರ ನಾಯಕರ ಮೇಲೆ ವಿಶ್ವಾಸವಿಲ್ಲ. ಅವರಿಗೆ ಇರುವ ಏಕೈಕ ಭರವಸೆ ರಾಹುಲ್ ಗಾಂಧಿ.
ಸಿದ್ದರಾಮಯ್ಯ ಕೂಡ ಈಗೀಗ ಪಾಕಿಸ್ತಾನದಲ್ಲಿ ಜನಪ್ರಿಯ ಆಗುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ ರಾಹುಲ್ ಗಾಂಧಿಗೆ ಕರ್ನಾಟಕವೇ ಎಟಿಎಂ. ಅಸಹಾಯಕ ಪರಿಸ್ಥಿತಿಯಲ್ಲಿರುವ ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಸರ್ಕಾರವನ್ನು ಹೊಗಳಲೇ ಬೇಕು. ಸಿದ್ದು ಕುರ್ಚಿ ಉಳಿಸಿಕೊಳ್ಳಲು ಹಣ ಕೊಟ್ಟರೆ, ಡಿ.ಕೆ. ಶಿವಕುಮಾರ್ ಕುರ್ಚಿ ಗಳಿಸಲು ಕೊಡುತ್ತಿದ್ದಾರೆ’ ಎಂದು ಟೀಕಿಸಿದರು.

‘ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಎರಡು ವರ್ಷವೂ ರಾಜ್ಯದ ಪಾಲಿಗೆ ಕರಾಳ ದಿನ. ಈ ಅವಧಿಯಲ್ಲಿ ರಾಜ್ಯದ ಸರ್ಕಾರಿ ಆಸ್ಪತ್ರೆಗಳ್ಲಿ 736 ಬಾಣಂತಿಯರು, 1100ಕ್ಕೂ ನವಜಾತ ಶಿಶುಗಳು ಸಾವನ್ನಪ್ಪಿದ್ದಾರೆ. 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೆಲ್ಲ ಸಂಭ್ರಮಿಸುವ ಸಂಗತಿಗಳ?’ ಎಂದು ಪ್ರಶ್ನಿಸಿದರು.

‘ ಕರ್ನಾಟಕದ ಇತಿಹಾಸದಲ್ಲಿ ಅತಿ ಹೆಚ್ಚು ಸಾಲ ಮಾಡಿದ ಕೀರ್ತಿ ಸಿದ್ದರಾಮಯ್ಯ ಸರ್ಕಾರದ್ದು. ಅವರ ಮನೆತನದ ಆದಾಯ ಹೆಚ್ಚಾಗಿದೆ. ಸರ್ಕಾರದ ಸಾಲವೂ ಜಾಸ್ತಿ ಆಗುತ್ತಿದೆ. ರಾಜ್ಯದ ₹7.64 ಲಕ್ಷ ಕೋಟಿ ಸಾಲದ ಪೈಕಿ ಸಿದ್ದರಾಮಯ್ಯ ಒಬ್ಬರೆ ₹4 ಲಕ್ಷ ಕೋಟಿ ಸಾಲ ಮಾಡಿದ್ದಾರೆ’ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.