ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗೋಕರ್ಣ: ಐದು ಸಿಲಿಂಡರ್ ಸ್ಫೋಟ, ಮನೆ ಸಂಪೂರ್ಣ ಭಸ್ಮ

Published : 31 ಡಿಸೆಂಬರ್ 2019, 18:48 IST
ಫಾಲೋ ಮಾಡಿ
Comments

ಗೋಕರ್ಣ: ಇಲ್ಲಿಯ ತಾರಮಕ್ಕಿಯಲ್ಲಿ ಮನೆಯೊಂದರ ಗೋದಾಮಿನಲ್ಲಿದ್ದ ಐದು ಸಿಲಿಂಡರ್‌ಗಳು ಸೋಮವಾರ ಸ್ಫೋಟಗೊಂಡಿವೆ. ಇದರ ಪರಿಣಾಮ ಮನೆ ಸಂಪೂರ್ಣ ಭಸ್ಮವಾಗಿದೆ. ಅದೃಷ್ಟವಶಾತ್ ಜೀವಹಾನಿಯಾಗಿಲ್ಲ.

ನಾಗರಾಜ ಸಾನು ಎಂಬುವವರ ಮನೆಯಲ್ಲಿ ಅವಘಡ ನಡೆದಿದೆ. ಆ ಸಂದರ್ಭದಲ್ಲಿ ಯಾರೂ ಮನೆಯಲ್ಲಿ ಇರಲಿಲ್ಲ.

ಅವರು ಕೇಟರಿಂಗ್ ಉದ್ಯಮಿಯಾಗಿದ್ದು, ಒಟ್ಟು ಐದು ಸಿಲಿಂಡರ್ ಗಳು ಸ್ಫೋಟವಾಗಿವೆ. ಮನೆಯಲ್ಲಿ ಮತ್ತೂ ಎರಡು ಸಿಲಿಂಡರ್ ಗಳು ಇವೆ ಎನ್ನಲಾಗಿದ್ದು, ಮತ್ತಷ್ಟು ಆತಂಕಗೊಂಡ ಯಾರೂ ಬೆಂಕಿ ನಂದಿಸಲು ಹೋಗಿಲ್ಲ. ಮನೆಯಲ್ಲಿದ್ದ ಅಡುಗೆ ಸಾಮಗ್ರಿ, ಶಾಮಿಯಾನ ಎಲ್ಲಾ ಸುಟ್ಟುಹೋಗಿದೆ.

ಅಗ್ನಿಶಾಮಕ ವಾಹನ ಕುಮಟಾದಿಂದ ಬರಲು ಸಮಯಹಿಡಿದ ಕಾರಣ ಅನಾಹುತದ ಪ್ರಮಾಣ ಹೆಚ್ಚಾಯಿತು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT