ಬೆಂಗಳೂರು: ದಸರಾ ಮಹೋತ್ಸವ, ಸಾಲು ಸಾಲು ಸರ್ಕಾರಿ ರಜೆಗಳು ಹಾಗೂ ಶಾಲೆಗಳಿಗೆ ದಸರಾ ರಜೆ ಇರುವು ದರಿಂದ ಪ್ರವಾಸ, ಧಾರ್ಮಿಕ ಸ್ಥಳ ಹಾಗೂ ಊರಿಗೆ ತೆರಳುವರ ಸಂಖ್ಯೆ ಹೆಚ್ಚಾಗಿದ್ದು, ಶುಕ್ರವಾರ ನಗರದ ಬಸ್ ನಿಲ್ದಾಣಗಳೆಲ್ಲ ಪ್ರಯಾಣಿಕರಿಂದ ಭರ್ತಿಯಾಗಿದ್ದವು.
ನಗರದಿಂದ ಹೊರಟ ಎಲ್ಲ ಬಸ್‌ಗಳು ಪ್ರಯಾಣಿಕರಿಂದ ತುಂಬಿದ್ದವು. ಗುರು ವಾರ ರಾತ್ರಿಯಿಂದಲೇ ಜನರು ಊರಿ ನತ್ತ ತೆರಳಿದ್ದು ಕಂಡುಬಂತು. ನಗರದ ಕೆಂಪೇಗೌಡ ಬಸ್ ನಿಲ್ದಾಣ, ಯಶವಂತಪುರ, ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ, ಕಂಟೋನ್ಮೆಂಟ್ ಹಾಗೂ ಬೈಯಪ್ಪನಹಳ್ಳಿ ನಿಲ್ದಾಣದಲ್ಲೂ ಪ್ರಯಾಣಿಕರ ದಟ್ಟಣೆಯಿತ್ತು.
ಖಾಸಗಿ ಬಸ್‌ಗಳಲ್ಲಿ ಪ್ರಯಾಣ ದರವು ದುಬಾರಿಯಾಗಿತ್ತು. ಕೊನೆಯ ಕ್ಷಣದಲ್ಲಿ ಬಂದ ಪ್ರಯಾಣಿಕರಿಗೆ ಸೀಟು ಲಭ್ಯ ಇಲ್ಲ ಎಂಬ ಉತ್ತರ ದೊರೆಯಿತು. ಇದರಿಂದ ಊರಿಗೆ ತೆರಳಲು ಬಂದ ಪ್ರಯಾಣಿಕರು ನಿರಾಸೆಗೆ ಒಳಗಾದರು.
ಧಾರ್ಮಿಕ ಸ್ಥಳದತ್ತ ಜನರು: ನಗರ ದಿಂದ ಧರ್ಮಸ್ಥಳ, ಉಡುಪಿ, ಮಂಗಳೂರು, ಹೊರನಾಡು, ಶೃಂಗೇರಿ ಯತ್ತ ಹೆಚ್ಚಿನ ಮಂದಿ ಶುಕ್ರವಾರ ರಾತ್ರಿಯಿಂದಲೇ ಪ್ರಯಾಣಿಸಿದರು. ಶನಿವಾರ ಇನ್ನೂ ಹೆಚ್ಚಿನ ಮಂದಿ ತೆರಳಲಿ ದ್ದಾರೆ ಎಂದು ಚಾಲಕರು ತಿಳಿಸಿದರು. ಮೈಸೂರು ದಸರಾ ವೀಕ್ಷಣೆಗೆ ತೆರಳುವ ವರ ಸಂಖ್ಯೆಯೂ ಈ ಬಾರಿ ಏರಿಕೆ ಯಾಗಿದೆ. ಮಡಿಕೇರಿಯಲ್ಲೂ ದಸರಾ ನಡೆಯುತ್ತಿದ್ದು, ಮಂಜಿನ ನಗರಿಯತ್ತ ಯುವಜನತೆ ಪ್ರಯಾಣಿಸಿದರು.
ಕೆಎಸ್‌ಆರ್‌ಟಿಸಿ 2,000ಕ್ಕೂ ಅಧಿಕ ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಕರ್ನಾಟಕ ಸಾರಿಗೆ (ವೇಗದೂತ), ರಾಜಹಂಸ, ಸ್ಲೀಪರ್, ಐರಾವತ, ಐರಾವತ ಕ್ಲಬ್ ಕ್ಲಾಸ್ (ಮಲ್ಟಿ ಆಕ್ಸಲ್) ಇ.ವಿ ಪವರ್ ಪ್ಲಸ್, ಅಂಬಾರಿ ಕ್ಲಬ್ ಕ್ಲಾಸ್, ಅಂಬಾರಿ ಉತ್ಸವ್ ಹಾಗೂ ಪಲ್ಲಕ್ಕಿ ಬಸ್‌ಗಳಲ್ಲಿ ಜನರು ವಿವಿಧ ನಗರಕ್ಕೆ ತೆರಳಿದವು.
ರಾಷ್ಟ್ರೀಯ ಹೆದ್ದಾರಿಯಲ್ಲಿ ದಟ್ಟಣೆ: ತುಮಕೂರು ರಸ್ತೆ, ಮೈಸೂರು ರಸ್ತೆ, ಬಳ್ಳಾರಿ ರಸ್ತೆಯಲ್ಲಿ ಗುರುವಾರ ರಾತ್ರಿ ಯಿಂದಲೇ ವಾಹನ ದಟ್ಟಣೆ ಕಂಡು ಬಂತು. ಜಂಕ್ಷನ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಇದರಿಂದ ಚಾಲಕರು ಪರದಾಡಿದರು.
ಆರ್‌ಟಿಒ ಪರಿಶೀಲನೆ: ಹೆಚ್ಚಿನ ದರ ವಸೂಲಿ ಮಾಡಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಬಸ್‌ಗಳ ಮೇಲೆ ಆರ್‌ಟಿಒ ಅಧಿಕಾರಿಗಳು ದಾಳಿ ಪರಿಶೀಲನೆ ನಡೆಸಿದರು.
ಕೆಲವು ಖಾಸಗಿ ಬಸ್‌ಗಳಲ್ಲಿ ಮಿತಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯುತ್ತಿರುವುದು ತಪಾಸಣೆ ವೇಳೆ ಕಂಡುಬಂದಿದೆ. ಚಾಲಕರು ಹಾಗೂ ನಿರ್ವಾಹಕರಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.