ಹುದ್ದೆಗಳ ಭರ್ತಿಗೆ ಶಿಫಾರಸು
ವಿವಿಧ 23 ಇಲಾಖೆಗಳ ಸಮರ್ಪಕ ಕಾರ್ಯ ನಿರ್ವಹಣೆಗೆ ತುರ್ತು ಅಗತ್ಯವಿರುವ 15 ಸಾವಿರ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒಂದೇ ಹಂತದಲ್ಲಿ ನೇಮಕ ಮಾಡಿಕೊಳ್ಳಬೇಕು ಎಂದು ಆಡಳಿತ ಸುಧಾರಣಾ ಆಯೋಗ ಶಿಫಾರಸು ಮಾಡಿದೆ. ಕೃಷಿ ಇಲಾಖೆಯಲ್ಲಿ 1,870 ಸಹಾಯಕ ಕೃಷಿ ಅಧಿಕಾರಿಗಳು, ಕೌಶಲ ಅಭಿವೃದ್ಧಿ ಇಲಾಖೆಯಲ್ಲಿ 1,521 ಕಿರಿಯ ತರಬೇತಿ ಅಧಿಕಾರಿಗಳು, ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 1,397 ನರ್ಸಿಂಗ್ ಅಧಿಕಾರಿಗಳು ಸೇರಿ ಖಾಲಿ ಇರುವ ಎ, ಬಿ ಮತ್ತು ಸಿ ವೃಂದದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು ಎಂದು ಪಟ್ಟಿ ನೀಡಲಾಗಿದೆ.