ಮೈಸೂರು: 'ಆರ್ಸಿಬಿ ಗೆಲುವಿನ ಗಾಂಭೀರ್ಯತೆ ಅರ್ಥ ಮಾಡಿಕೊಳ್ಳದೇ ಕರ್ನಾಟಕದ ಮರ್ಯಾದೆ ಹಾಳು ಮಾಡಿದ್ದೀರಿ. ಜನರಲ್ಲಿ ನೋವು ತಂದಿದ್ದೀರಿ. ನಿಮ್ಮ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಿ' ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರು.

ನಗರದಲ್ಲಿ ಭಾನುವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು 'ಪೊಲೀಸರು ನೈತಿಕತೆಯ ಮುಖವಾಗಿ ಕೆಲಸ ಮಾಡುತ್ತಿದ್ದಾರೆ. ದಯಾನಂದ್ ದಕ್ಷ ಅಧಿಕಾರಿ. ಅಂತಹವರ ಅಮಾನತು ಸರಿಯಲ್ಲ. ನಿಮ್ಮ ಪಟಾಲಂ ಪಾಪಕ್ಕೆ ಅವರನ್ನು ಗುರಿ ಮಾಡಿರುವುದು ಮಹಾ ಅಪರಾಧ. ಇದಕ್ಕೆ ಬೆಲೆ ತೆತ್ತದಿದ್ದರೆ ಜನರೇ ಪಾಠ ಕಲಿಸುತ್ತಾರೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಎಚ್ಚರಿಸಿದರು.

ಹಳಿ ತಪ್ಪಿದ ಸರ್ಕಾರ:

'ಇದು ಹಳಿ ತಪ್ಪಿದ ಸರ್ಕಾರ. ಟ್ರ್ಯಾಕ್ ಇಲ್ಲದೆಯೇ ಓಡುತ್ತಿದೆ. ಅವರ ಒಳ ಒಪ್ಪಂದ ಹೇಗಿದೆಯೋ ಗೊತ್ತಿಲ್ಲ' ಎಂದರು.

'ಕಾಂಗ್ರೆಸ್ ಸಿದ್ದರಾಮಯ್ಯರಿಗೆ ಕೊಟ್ಟಷ್ಟು ಫ್ರೀ ಹ್ಯಾಂಡ್ ಇನ್ನೊಬ್ಬರಿಗೆ ಕೊಟ್ಟಿಲ್ಲ. ಅವರ ವಿವೇಕಕ್ಕೆ ಏನಾಗಿದೆಯೋ ಗೊತ್ತಿಲ್ಲ. ಅಧಿಕಾರಕ್ಕೆ ಜೋತು ಬೀಳದೇ ನೈತಿಕತೆಯಿಂದ ಹೊಣೆ ಹೊರಬೇಕು' ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.