ಬೆಂಗಳೂರು: ‘ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಮತ್ತು ವಿದ್ಯುತ್ ಸರಬರಾಜು ಕಂಪನಿಗಳ ನೌಕರರು ಹಾಗೂ ಅಧಿಕಾರಿಗಳಿಗೆ ಶೇ 22ರಷ್ಟು ಪರಿಷ್ಕೃತ ವೇತನ ನೀಡಬೇಕೆಂದು ಆಗ್ರಹಿಸಿ ಇದೇ 16ರಿಂದ ರಾಜ್ಯದಾದ್ಯಂತ ಎಲ್ಲ ನೌಕರರು ಕರ್ತವ್ಯಕ್ಕೆ ಗೈರಾಗಿ ಪ್ರತಿಭಟನೆ ನಡೆಸಲಿದ್ದಾರೆ’ ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘ(ಕವಿಪ್ರನಿ) ತಿಳಿಸಿದೆ.

ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕವಿಪ್ರನಿ ನೌಕರರ ಸಂಘ ಮತ್ತು ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಆರ್.ಎಚ್. ಲಕ್ಷ್ಮೀಪತಿ, ‘2022ರ ಏಪ್ರಿಲ್ 1ರಿಂದ ನೀಡಬೇಕಾದ ಪರಿಷ್ಕೃತ ವೇತನ, ಪಿಂಚಣಿ ಮತ್ತು ಇತರೆ ಭತ್ಯೆಗಳ ಪಟ್ಟಿಯನ್ನು 2021ರಲ್ಲಿ ಆಡಳಿತ ವರ್ಗಕ್ಕೆ ಸಲ್ಲಿಸಲಾಗಿತ್ತು. ಅದರಂತೆ ಶೇ 30ರಷ್ಟು ವೇತನ, ಪಿಂಚಣಿ ಮತ್ತು ಭತ್ಯೆಗಳ ಪರಿಷ್ಕರಣೆ ಮಾಡಬಹುದೆಂದು ಶಿಫಾರಸು ಮಾಡಿ ವರದಿ ಸಲ್ಲಿಸಲಾಗಿತ್ತು. 2022ರ ಸೆಪ್ಟೆಂಬರ್ 15ರಂದು ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ನೌಕರರು ಮತ್ತು ಅಧಿಕಾರಿಗಳಿಗೆ ಶೇ 22ರಷ್ಟು ವೇತನ, ಪಿಂಚಣಿ ಮತ್ತು ಇತರೆ ಭತ್ಯೆಗಳ ಪರಿಷ್ಕರಿಸಲು ತೀರ್ಮಾನಿಸಲಾಗಿತ್ತು. ಒಂದು ವರ್ಷವಾದರೂ ಇದುವರೆಗೂ ನೌಕರರ ಯಾವುದೇ ಬೇಡಿಕೆಗಳನ್ನು ಈಡೀರಿಸಿಲ್ಲ’ ಎಂದು ಆರೋಪಿಸಿದರು.

‘ಆಡಳಿತ ವರ್ಗದ ವಿಳಂಬ ನೀತಿಯನ್ನು ಖಂಡಿಸಿ 2023ರ ಮಾರ್ಚ್ 2ರಂದು ಕಾರ್ಮಿಕ ವಿವಾದ ಕಾಯ್ದೆ 1947ರ ಕಂಡಿಕೆ 22ರ ಅಡಿಯಲ್ಲಿ ಮುಷ್ಕರ ನಡೆಸುವುದಾಗಿ ಆಡಳಿತ ವರ್ಗ ಮತ್ತು ಕಾರ್ಮಿಕ ಇಲಾಖೆ ನೋಟಿಸ್ ನೀಡಲಾಗಿದೆ. ಆಡಳಿತ ವರ್ಗ ಶಿಫಾರಸು ಮಾಡಿದ ಶೇ 22ರಷ್ಟು ಪರಿಷ್ಕೃತ ವೇತನ ನೀಡಬೇಕಾಗಿತ್ತು. ಆದರೆ, ಇದೇ 10ರಂದು ಆರ್ಥಿಕ ಇಲಾಖೆಯು ಆಡಳಿತ ವರ್ಗಕ್ಕೆ ಬರೆದ ಪತ್ರದಲ್ಲಿ ಶೇ 12ರಿಂದ 15 ರಷ್ಟು ವೇತನ ಪರಿಷ್ಕರಣೆ ಮಾಡಬಹುದು. ಅದನ್ನು 2022ರ ಏಪ್ರಿಲ್ 1ರ ಬದಲಾಗಿ 2023ರ ಏಪ್ರಿಲ್ 1ರಿಂದ ಅನ್ವಯವಾಗುವಂತೆ ನೀಡಲಾಗುವುದು ಎಂದು ತಿಳಿಸಿದೆ’ ಎಂದರು.

ವಿದ್ಯುತ್ ಅವಘಡ: 400 ನೌಕರರ ಸಾವು
ವಿದ್ಯುತ್ ಇಲಾಖೆಯ ಸುಮಾರು 60 ಸಾವಿರ ನೌಕರರ ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ 45 ಸಾವಿರ ಪಿಂಚಣಿ ನೌಕರರಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಅವಘಡಗಳಿಂದ ಪ್ರತಿ ವರ್ಷ 400 ಜನ ಮೃತಪಡುತ್ತಿದ್ದಾರೆ ಎಂದು ಆರ್.ಎಚ್. ಲಕ್ಷ್ಮೀಪತಿ ಮಾಹಿತಿ ನೀಡಿದರು.

ಇಂಧನ ಸಚಿವರು ನೌಕರರ ಸಂಘ ಮತ್ತು ಒಕ್ಕೂಟದ ಸಂಪರ್ಕದಲ್ಲಿದ್ದು, ಈಗಾಗಲೇ ಎರಡು ಸುತ್ತಿನ ಮಾತುಕತೆ ನಡೆಸಿದ್ದಾರೆ. ಕೂಡಲೇ ಅವರ ಸಮಸ್ಯೆಯನ್ನು ಬಗೆಹರಿಸಲಾಗುವುದು.
–ಬಸವರಾಜ ಬೊಮ್ಮಾಯಿ, ಸಿ.ಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.