ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ಅಧಿಕಾರಿಗಳು, ಈ ಪ್ರಕರಣದ ಸಾಕ್ಷಿ ದೂರುದಾರ ಸೇರಿ ಆರು ಮಂದಿ ಸೇರಿ ಯಾವ ರೀತಿ ನ್ಯಾಯಾಲಯದ ದಾರಿ ತಪ್ಪಿಸಿದ್ದಾರೆ ಎಂಬ ಕುರಿತು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯಕ್ಕೆ ಗುರುವಾರ ವರದಿ ಸಲ್ಲಿಸಿದರು.

ಎಸ್ಐಟಿಯ ಮುಖ್ಯ ತನಿಖಾಧಿಕಾರಿಗಳಾದ ಜಿತೇಂದ್ರ ಕುಮಾರ್ ದಯಾಮ ಹಾಗೂ ಸಿ.ಎ.ಸೈಮನ್ ಅವರು ಬೆಳ್ತಂಗಡಿಯ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಟಿ.ವಿಜಯೇಂದ್ರ ಅವರಿಗೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ (ಬಿಎನ್ಎಸ್ಎಸ್) ಸೆಕ್ಷನ್ 215 ಅಡಿ ವರದಿ ಸಲ್ಲಿಸಿದರು.

‘ಬಿಎನ್ಎಸ್ಎಸ್ ಸೆಕ್ಷನ್ 215ರ ಅಡಿ ನ್ಯಾಯಾಲಯಕ್ಕೆ 5000ಕ್ಕೂ ಹೆಚ್ಚು ಪುಟಗಳ ವರದಿ ಸಲ್ಲಿಸಲಾಗಿದೆ. ಈ ಪ್ರಕರಣದಲ್ಲಿ ಸಾಕ್ಷಿ ದೂರುದಾರ, ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ ಮಟ್ಟೆಣ್ಣವರ, ಜಯಂತ್ ಟಿ., ವಿಠಲ ಗೌಡ, ಸುಜಾತಾ ಭಟ್ ನ್ಯಾಯಾಲಯದ ದಾರಿ ತಪ್ಪಿಸಿದ ಕುರಿತು ಗಮನಕ್ಕೆ ತರಲಾಗಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

‘ಈ ಪ್ರಕರಣದಲ್ಲಿ ನ್ಯಾಯಾಲಯದ ದಾರಿ ತಪ್ಪಿಸಲಾದ ಕುರಿತು ಹಾಗೂ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಬಿಎನ್ಎಸ್ಎಸ್ ಸೆಕ್ಷನ್ 379ರ ಅಡಿ ನಿರ್ದೇಶನ ನೀಡುವಂತೆ ಕೋರಿದ್ದೇವೆ. ನ್ಯಾಯಾಲಯದ ಆದೇಶವನ್ನು ಆಧರಿಸಿ ಈ ಪ್ರಕರಣದ ಮುಂದಿನ ತನಿಖೆ ನಡೆಯಲಿದೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳೂ ಸೇರಿದಂತೆ ಕೆಲವೊಂದು ಮಹತ್ವದ ದಾಖಲೆಗಳು ಇನ್ನಷ್ಟೇ ಕೈಸೇರಬೇಕಿದೆ. ಹಾಗಾಗಿ ಇದನ್ನು ಪ್ರಾಥಮಿಕ ವರದಿ ಎಂದು ಪರಿಗಣಿಸಬಹುದೇ ಹೊರತು, ಇದು ಸಮಗ್ರ ವರದಿ ಅಲ್ಲ. ಈ ಪ್ರಕರಣದ ತನಿಖೆ ಶುರುವಾಗುವ ಮುನ್ನ ನ್ಯಾಯಾಲಯಕ್ಕೆ ಹೇಗೆ ಸುಳ್ಳು ಪುರಾವೆಗಳನ್ನು ಒಪ್ಪಿಸಲಾಯಿತು, ಪ್ರಕರಣಕ್ಕೆ ಸಂಬಂಧಪಡದ ಬುರುಡೆಯನ್ನು ಹಾಗೂ ತಿರುಚಿದ ಸಾಕ್ಷ್ಯಗಳನ್ನು ತಂದೊಪ್ಪಿಸಿ ಹೇಗೆ ನ್ಯಾಯಾಂಗದ ಹಾದಿ ತಪ್ಪಿಸಲಾಯಿತು ಎಂಬ ವಿವರಗಳು ವರದಿಯಲ್ಲಿವೆ. ಸಾಕ್ಷಿ ದೂರುದಾರ ಸೇರಿದಂತೆ ಆರು ಮಂದಿ ಸೇರಿಕೊಂಡು ಹೇಗೆ ನ್ಯಾಯಾಲಯದ ದಾರಿ ತಪ್ಪಿಸಿದರು, ಇದಕ್ಕಾಗಿ ಹೇಗೆ ಸಂಚು ರೂಪಿಸಲಾಗಿದೆ ಎಂಬ ಅಂಶಗಳನ್ನು ಈ ವರದಿ ಕೇಂದ್ರೀಕರಿಸಿದೆ’ ಎಂದು ಎಸ್ಐಟಿ ಮೂಲಗಳು ತಿಳಿಸಿವೆ.

ಈ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಎಸ್ಐಟಿ ಅಧಿಕಾರಿಗಳು ವಿಶೇಷ ಸರ್ಕಾರಿ ವಕೀಲರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು.

ಏನಿದು ಸೆಕ್ಷನ್: ಬಿಎನ್ಎಸ್ಎಸ್ ಸೆಕ್ಷನ್ 215 ಸಾರ್ವಜನಿಕ ನ್ಯಾಯದಾನ ಪ್ರಕ್ರಿಯೆಗೆ ವಿರುದ್ಧವಾದ ಅಪರಾಧಗಳನ್ನು ನ್ಯಾಯಾಲಯದ ಗಮನಕ್ಕೆ ತರುವುದಕ್ಕೆ ಸಂಬಂಧಿಸಿದ್ದಾಗಿದೆ. ನ್ಯಾಯಾಲಯ ಇಂತಹ ನಿರ್ದಿಷ್ಟ ಅಪರಾಧಗಳನ್ನು ಯಾವ ರೀತಿ ಪರಿಗಣಿಸಬೇಕು ಎಂಬ ವಿಧಾನಗಳ ಕುರಿತು ಈ ಸೆಕ್ಷನ್ ನಿರ್ದಿಷ್ಟಪಡಿಸುತ್ತದೆ. ಈ ಕುರಿತು ವಿಚಾರಣೆ ಪ್ರಾರಂಭಿಸುವ ಮುನ್ನ ನ್ಯಾಯಾಲಯದಿಂದ ಅಥವಾ ಅಧಿಕೃತ ಅಧಿಕಾರಿಯಿಂದ ಲಿಖಿತ ದೂರು ಸಲ್ಲಿಕೆಯಾಗಿರಬೇಕು. ಸಾರ್ವಜನಿಕ ನ್ಯಾಯಕ್ಕೆ ವಿರುದ್ಧವಾದ ಅಪರಾಧಗಳ ತನಿಖೆಯನ್ನು ಹೇಗೆ ನಿಭಾಯಿಸಬೇಕು ಮತ್ತು ನ್ಯಾಯಾಲಯದ ಕಲಾಪಗಳಿಗೆ ಅಡಚಣೆಯಾದಾಗ ನ್ಯಾಯಾಲಯಗಳು ಯಾವ ರೀತಿ ಕ್ರಮ ಕೈಗೊಳ್ಳುಬೇಕು ಎಂಬ ಕುರಿತು ಇದು ವಿವರಿಸುತ್ತದೆ.

ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ಹೂತುಹಾಕಿ, ಸಾಕ್ಷ್ಯಗಳನ್ನು ಮುಚ್ಚಿಹಾಕಲಾಗಿದೆ ಎಂದು ಆರೋಪಿಸಿ ಸಾಕ್ಷಿ ದೂರುದಾರ ಧರ್ಮಸ್ಥಳ ಪೊಲೀಸ್ ಠಾಣೆಗೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿದ್ದ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಸರ್ಕಾರ 2025ರ ಜುಲೈ 19ರಂದು ಎಸ್ಐಟಿಯನ್ನು ರಚಿಸಿತ್ತು. ಎಸ್ಐಟಿಯು ಸುಮಾರು ನಾಲ್ಕು ತಿಂಗಳು ಈ ಪ್ರಕರಣದ ತನಿಖೆ ನಡೆಸಿದೆ.

‘ವರದಿ ಬಹಿರಂಗಗೊಳಿಸುವಂತಿಲ್ಲ’

‘ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯನ್ನು ತನ್ನ ಒಪ್ಪಿಗೆ ಇಲ್ಲದೇ ಬಹಿರಂಗಗೊಳಿಸುವಂತಿಲ್ಲ ಎಂದು ಬೆಳ್ತಂಗಡಿ ಜೆಎಂಎಫ್ಸಿ ನ್ಯಾಯಾಲಯ ಸೂಚಿಸಿದೆ’ ಎಂದು ಮೂಲಗಳು ತಿಳಿಸಿವೆ. ‘ಈ ವರದಿಯ ಬಿಡುಗಡೆಗೆ ಒಪ್ಪಿಗೆ ನೀಡುವ ಬಗ್ಗೆ ಅಥವಾ ಆರೋಪಿಗಳಿಗೆ ಅದರ ಪ್ರತಿಗಳನ್ನು ಒದಗಿಸುವ ಬಗ್ಗೆ ಸೋಮವಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ’ ಎಂಬುದು ಈ ಮೂಲಗಳ ಮಾಹಿತಿ.

‘ತನಿಖೆ ಇನ್ನೂ ಮುಕ್ತಾಯವಾಗಿಲ್ಲ’

‘ಈ ವರದಿ ಸಲ್ಲಿಕೆಯಾದ ಮಾತ್ರಕ್ಕೆ ಪ್ರಕರಣದ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅರ್ಥವಲ್ಲ. ಇದೊಂದು ಪ್ರಾಥಮಿಕ ಪ್ರಕ್ರಿಯೆ ಮಾತ್ರ. ಧರ್ಮಸ್ಥಳ ಗ್ರಾಮದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಮೃತದೇಹಗಳನ್ನು ಹೂತುಹಾಕಿರುವ ಆರೋಪ ಅನುಮಾನಾಸ್ಪದ ಆತ್ಮಹತ್ಯೆ ಪ್ರಕರಣಗಳು ನೇತ್ರಾವತಿ ಸ್ನಾನಘಟ್ಟದ ಸಮೀಪದ ಬಂಗ್ಲಗುಡ್ಡೆ ಕಾಡಿನಲ್ಲಿ ಸಿಕ್ಕ ಮೃತದೇಹಗಳ ಅವಶೇಷಗಳಿಗೆ ಸಂಬಂಧಿಸಿದ ತನಿಖೆ ಇನ್ನೂ ಮುಂದುವರಿಯಲಿದೆ. ಈ ಕುರಿತ ಸತ್ಯ ಸಂಗತಿ ಏನೆಂಬುದು ತನಿಖೆಯಿಂದ ಬಯಲಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಎಸ್ಐಟಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.