ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಮೃತದೇಹಗಳನ್ನು ವಿಲೇ ಮಾಡಿದ್ದು, ಅಸಹಜ ಸಾವುಗಳಲ್ಲಿ ಗುರುತು ಪತ್ತೆಯಾಗದ 38 ಪ್ರಕರಣಗಳ ಸಂಬಂಧ ಬೆಳ್ತಂಗಡಿ ಅಥವಾ ಧರ್ಮಸ್ಥಳ ಠಾಣೆಗಳಲ್ಲಿ ಯುಡಿಆರ್ ದಾಖಲಿಸಿರುವ ವಿವರಗಳು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ಲಭ್ಯವಾಗಿಲ್ಲ ಎಂದು ಗೊತ್ತಾಗಿದೆ.

ಧರ್ಮಸ್ಥಳ ಬೆಳವಣಿಗೆಯ ಪ್ರಕರಣದ ತನಿಖೆ ವೇಳೆ ಎಸ್ಐಟಿಯವರು, ಸ್ಥಳೀಯ ಗ್ರಾಮ ಪಂಚಾಯಿತಿ ಮೂರು ದಶಕಗಳಲ್ಲಿ ವಿಲೇಮಾಡಿದ್ದ ಶವಗಳ ವಿವರ ಕಲೆ ಹಾಕಿದ್ದರು. ಇದೇ ಅವಧಿಯಲ್ಇ ಬೆಳ್ತಂಗಡಿ (ಧರ್ಮಸ್ಥಳ ಮೊದಲು ಈ ಠಾಣೆ ಸುಪರ್ದಿಯಲ್ಲಿತ್ತು) ಮತ್ತು ಧರ್ಮಸ್ಥಳ ಠಾಣೆಗಳಲ್ಲಿ ದಾಖಲಾಗಿದ್ದ ಯುಡಿಆರ್ ಪ್ರಕರಣಳ ವಿವರ ಕಲೆಹಾಕಿದ್ದರು. ಎರಡನ್ನು ತಾಳೆ ಹಾಕಿದಾಗ ಕೆಲ ಪ್ರಕರಣಗಳ ದಾಖಲೆ ಇಲ್ಲದಿರುವುದು ತಿಳಿದುಬಂದಿತ್ತು.

‘ತಾಳೆ ಹಾಕಿ ನೋಡಿದಾಗ 38 ಪ್ರಕರಣಗಳಲ್ಲಿ ಸ್ಥಳೀಯ ಠಾಣೆಯಲ್ಲಿ ದಾಖಲೆಗಳು ಸಿಕ್ಕಿಲ್ಲ. ಇಂತಹ ಪ್ರಕರಣಗಳು ಹೆಚ್ಚಾಗಬಹುದು. ಕೆಲವು 2-3 ದಶಕಗಳಿಗಿಂತಲೂ ಹಳೆಯ ಪ್ರಕರಣಗಳಾಗಿದ್ದು, ದಾಖಲೆಗಳು ಕಳೆದುಹೋಗಿರುವ ಸಾಧ್ಯತೆಯೂ ಇವೆ’ ಎಂದು ಮೂಲಗಳು ತಿಳಿಸಿವೆ.

‘ಮೃತದೇಹ ಪತ್ತೆಯಾದಾಗ, ಗುರುತು ಪತ್ತೆಯಾಗದಿದ್ದರೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕವೇ ವಿಲೇ ಮಾಡಲಾಗುತ್ತದೆ. ಆದರೆ, ಆ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಯುಡಿಆರ್ ದಾಖಲಾಗಲೇ ಬೇಕು. ಪೊಲೀಸರು ಲಿಖಿತ ಮಾಹಿತಿ ನೀಡಿದ ಬಳಿಕವೇ ಗ್ರಾಮ ಪಂಚಾಯಿತಿಯವರು ಅಂತಹ ಮೃತದೇಹಗಳನ್ನು ವಿಲೇ ಮಾಡಬೇಕು. ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗದೆಯೇ ಯಾವುದಾದರೂ ಮೃತದೇಹವನ್ನು ಗ್ರಾಮ ಪಂಚಾಯಿತಿಯವರು ವಿಲೇ ಮಾಡಿದ್ದರೆ, ಅದು ಗಂಭೀರ ಲೋಪ. ಯುಡಿಆರ್ ಪ್ರಕರಣಗಳಲ್ಲಿ ಮೃತದೇಹಗಳ ಮರಣೋತ್ತರ ಪರೀಕ್ಷೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸ್ ಠಾಣೆಗಳಲ್ಲೂ ರಕ್ಷಿಸಿಡಬೇಕು’ ಎಂದು ಎಸ್ಐಟಿ ಮೂಲಗಳು ಹೇಳಿವೆ.

‘ಪೊಲೀಸರು ಕೆಲ ದಾಖಲೆ ಹಸ್ತಾಂತರಿಸುವಾಗಲೂ ಲೋಪ ಆಗಿರುವ ಸಾಧ್ಯತೆ ಇದೆ. ಅಥವಾ ತಪ್ಪಿ ಬೇರೆ ಕಡೆ ತೆಗೆದಿಟ್ಟಿರುವ ಸಾಧ್ಯತೆಯೂ ಇದೆ. ಈ ಬಗ್ಗೆ ಕೂಲಂಕಷವಾಗಿ ತನಿಖೆ ನಡೆದಿದೆ. ಯುಡಿಆರ್ ದಾಖಲೆ ಸಿಕ್ಕಿಲ್ಲ ಎಂಬ ಮಾತ್ರಕ್ಕೆ 38 ಮೃತದೇಹಗಳನ್ನು ಅಕ್ರಮವಾಗಿ ವಿಲೇ ಮಾಡಲಾಗಿದೆ ಎಂದು ಈ ಹಂತದಲ್ಲಿ ಹೇಳಲಾಗದು’ ಎಂದು ಮೂಲಗಳು ಹೇಳಿವೆ.

‘ಅಸಹಜವಾಗಿ ಸತ್ತವರ ಗುರುತು ಪತ್ತೆಯಾಗದ ಅನೇಕ ಪ್ರಕರಣಗಳಿಗೆ ಸಂಬಂಧಿಸಿ ಮೃತದೇಹಗಳನ್ನು ಎಲ್ಲಿ ಹೂಳಲಾಗಿದೆ ಎಂಬ ವಿವರಗಳೂ ಗ್ರಾಮ ಪಂಚಾಯಿತಿಯ ದಾಖಲೆಗಳಲ್ಲಿ ಸಿಕ್ಕಿಲ್ಲ’ ಎಂದೂ ಎಸ್ಐಟಿ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.