ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಇದೇ ತಿಂಗಳು ಸಮವಸ್ತ್ರ ವಿತರಣೆ: ಶಿಕ್ಷಣ ಇಲಾಖೆ

Last Updated 5 ಮಾರ್ಚ್ 2023, 19:49 IST
ಅಕ್ಷರ ಗಾತ್ರ

ಬೆಂಗಳೂರು: 2023-24ನೇ ಶೈಕ್ಷಣಿಕ ಸಾಲಿನ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳು ಸಿದ್ಧವಾಗಿದ್ದು, ಇದೇ ತಿಂಗಳು ಸಮವಸ್ತ್ರ ಹಾಗೂ ಏಪ್ರಿಲ್‌ ಅಂತ್ಯದ ಒಳಗೆ ಪಠ್ಯಪುಸ್ತಕಗಳು ಎಲ್ಲ ಶಾಲೆಗಳಿಗೂ ತಲುಪಲಿವೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಪಠ್ಯಪುಸ್ತಕ, ಸಮವಸ್ತ್ರ ಪೂರೈಕೆ ವಿಳಂಬದಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿತ್ತು. ಅಂತಹ ನ್ಯೂನತೆಗಳಿಗೆ ಅವಕಾಶ ನೀಡದಿರಲು ನಿರ್ಧರಿಸಿದ್ದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪೂರಕ ಸಿದ್ಧತೆ ಆರಂಭಿಸಿತ್ತು. ಈಗಾಗಲೇ ಶೇ 66 ರಷ್ಟು ಪಠ್ಯಪುಸ್ತಕಗಳು ಮುದ್ರಣವಾಗಿವೆ. ಶೇ 46ರಷ್ಟು ಪಠ್ಯಪುಸ್ತಕಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯನ್ನು ತಲುಪಿವೆ.

ಸಮವಸ್ತ್ರ ಪೂರೈಕೆಗೂ ಆದೇಶ ನೀಡಲಾಗಿದ್ದು, ಮಾರ್ಚ್ 15ರಿಂದಲೇ ಪೂರೈಕೆ ಪ್ರಕ್ರಿಯೆಗಳು ಆರಂಭವಾಗಲಿವೆ. 30ರ ಒಳಗೆ ಪೂರ್ಣಗೊಳ್ಳಲಿದೆ.

‘ಕೇಂದ್ರ ಜವಳಿ ಸಂಸ್ಥೆಯು ನೀಡಿದ ಸಲಹೆಗಳಂತೆ ಸಮವಸ್ತ್ರ ಸಿದ್ಧಪಡಿಸಿ, ಪೂರೈಸಲು ಮಾರಾಟಗಾರರಿಗೆ ನಿರ್ದೇಶನ ನೀಡಲಾಗಿದೆ. ರಾಜಸ್ಥಾನ, ಗುಜರಾತ್‌ ಮೂಲದ ಕಂಪನಿಗಳು ಪೂರೈಕೆಯ ಟೆಂಡರ್‌ ಪಡೆದಿವೆ. ಸಾಕಷ್ಟು ಮುಂಚಿತವಾಗಿ ಆದೇಶ ನೀಡಿದ್ದ ಕಾರಣ ಬೆಲೆಯಲ್ಲೂ ಶೇ 15ರಷ್ಟು ಉಳಿತಾಯವಾಗಿದೆ’ ಎಂದು ಇಲಾಖೆಯ ಆಯುಕ್ತ ಆರ್.ವಿಶಾಲ್‌ ಅವರು ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT