ತುಮಕೂರು: ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟದ ಪ್ರಯುಕ್ತ ಮಂಗಳವಾರ ಮಹಿಳೆಯರ ವಿಭಾಗದಲ್ಲಿ ನಡೆದ ಹಲವು ಸ್ಪರ್ಧೆಗಳಲ್ಲಿ ತಾಲ್ಲೂಕಿನ ಕ್ರೀಡಾಪಟುಗಳು ಮೇಲುಗೈ ಸಾಧಿಸಿದರು.
ಕಬಡ್ಡಿ, ವಾಲಿಬಾಲ್ ಪಂದ್ಯಾವಳಿಯಲ್ಲಿ ತುಮಕೂರು ತಂಡಗಳು ಪ್ರಶಸ್ತಿ ಗೆದ್ದರೆ, ಥ್ರೋಬಾಲ್, ಕೊಕ್ಕೊ ವಿಭಾಗದಲ್ಲಿ ರನ್ನರ್ ಅಪ್ ಆಗಿ ಹೊರ ಹೊಮ್ಮಿದವು. ಗುಬ್ಬಿ ತಂಡ ಕೊಕ್ಕೊ ಫೈನಲ್ ಗೆದ್ದರೆ, ಥ್ರೋಬಾಲ್‌ನಲ್ಲಿ ತಿಪಟೂರು ತಂಡ ಪ್ರಶಸ್ತಿ ಜಯಿಸಿತು. ಕಬಡ್ಡಿಯಲ್ಲಿ ತಿಪಟೂರು ಎರಡನೇ ಸ್ಥಾನ ಪಡೆದರೆ, ವಾಲಿಬಾಲ್‌ನಲ್ಲಿ ಕುಣಿಗಲ್ ದ್ವಿತೀಯ ಸ್ಥಾನಕ್ಕೆ ಭಾಜನವಾಯಿತು.
ಫಲಿತಾಂಶ: ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರ ವಿವರ.
100 ಮೀಟರ್ ಓಟ: ಶಿವಾನಿ ಎಸ್.ರೈ, ಕೆ.ಪಿ.ಅಮೃತಾ, ಎಸ್.ಆರ್.ಸಾಯಿ ಚಿನ್ಮಯಿ. 200 ಮೀ: ಶಿವಾನಿ ಎಸ್.ರೈ, ಆರ್.ವೈ.ಭೂಮಿಕಾ, ಎನ್.ಕೆ.ಮೇಘನಾ. 400 ಮೀ: ಎಸ್.ಬಿ.ಕವನ, ಆರ್.ವೈ.ಭೂಮಿಕಾ, ಮೋನಿಕಾ. 800 ಮೀ: ಎಲ್.ಎಸ್.ಜಾಹ್ನವಿ, ಲಲಿತಾ, ರಕ್ಷಾ. 1,500 ಮೀ: ಎಸ್.ರಕ್ಷಾ, ಪಿ.ಲಹರಿ. 3 ಸಾವಿರ ಮೀಟರ್: ಮಮತಾ, ಎಚ್.ಎಸ್.ಹರ್ಷಿತಾ, ಕೆ.ಎಸ್.ಇಂದ್ರಮ್ಮ. 100 ಮೀ ಹರ್ಡಲ್ಸ್: ಖುಷಿ, ಜಾಹ್ನವಿ.
ಉದ್ದ ಜಿಗಿತ: ಎಂ.ಸಿ.ಮೋನಿಕಾ, ಟಿ.ಎಂ.ಪ್ರೇಮಾ, ಎಂ.ಶ್ರೇಯಾ. ತ್ರಿಬಲ್ ಜಂಪ್: ಎಂ.ಶ್ರೇಯಾ, ಎಂ.ಸಿ.ಮೋನಿಕಾ, ಎಲ್.ಎಸ್.ಜಾಹ್ನವಿ. ಡಿಸ್ಕಸ್ ಥ್ರೋ: ಎನ್.ಡಿ.ಮಮತಾ, ಆರ್.ಪುಷ್ಪಾ, ಎಸ್.ರಾಧಾ. ಜಾವೆಲಿನ್ ಥ್ರೋ: ಎನ್.ಡಿ.ಮಮತಾ, ಎಸ್.ರಾಧಾ, ಆರ್.ಪುಷ್ಪಾ. ಶಾಟ್‌ಪುಟ್: ಎನ್.ಡಿ.ಮಮತಾ, ಅಜಾರಿ, ಅರ್ಪಿತಾ. ಎತ್ತರ ಜಿಗಿತ: ಇ.ಶ್ರೇಯಾ, ಎಂ.ಸಿ.ಮೋನಿಕಾ, ಎಸ್.ಮೌನಿಕಾ.
4X100 ಮೀಟರ್ ರಿಲೇ: ಶಿವಾನಿ ಎಸ್.ರೈ, ಟಿ.ಪಿ.ಯುಕ್ತಾ, ಎಸ್.ಬಿ.ಕವನ, ಎಸ್.ರಕ್ಷಾ. 4X400 ಮೀಟಲ್ ರಿಲೇ: ಡಿ.ಎನ್.ತ್ರಿವೇಣಿ, ಎಚ್.ಡಿ.ನಂದಿತಾ, ಎಚ್.ರಕ್ಷಿತಾ, ಕೆ.ಎಸ್.ಹೇಮಾವತಿ.
ಕೊಕ್ಕೊ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಗುಬ್ಬಿ ಪ್ರಥಮ, ಕುಣಿಗಲ್ ದ್ವಿತೀಯ ಸ್ಥಾನ ಪಡೆಯಿತು. ವಾಲಿಬಾಲ್‌ನಲ್ಲಿ ತುಮಕೂರು ಮೊದಲ ಮತ್ತು ಗುಬ್ಬಿ ಎರಡನೇ ಸ್ಥಾನ ಪಡೆಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.