ಮೈಸೂರು: ‘ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್ಕಂ ಮಾಡೋಕೆ ಆಗಲ್ಲ’ ಎನ್ನುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆದರು.

ತಮ್ಮ ಭಾಷಣದ ಆರಂಭದಲ್ಲಿ ವೇದಿಕೆಯಲ್ಲಿದ್ದವರ ಹೆಸರು ಪ್ರಸ್ತಾಪಿಸಿದ ಮುಖ್ಯಮಂತ್ರಿ, ಡಿ.ಕೆ. ಶಿವಕುಮಾರ್ ಹೆಸರನ್ನು ಬಿಟ್ಟಿದ್ದನ್ನು ವಕೀಲರೊಬ್ಬರು ನೆನಪಿಸಿದರು. ಆಗ ಸಿಟ್ಟಾದ ಅವರು, ‘ಇಲ್ಲಿ ಇಲ್ವಲ್ಲರಿ... ಹೊರಟು ಹೋಗಿದ್ದಾರೆ’ ಎಂದರು.

‘ಡಿ.ಕೆ. ಶಿವಕುಮಾರ್ ಹೊರಟು ಹೋದ್ರು ಬೆಂಗಳೂರಿಗೆ. ಯಾವಾಗಲೂ ಇರುವವರ ಹೆಸರು ಹೇಳಬೇಕೇ ಹೊರತು ಹೊರಟು ಹೋದವರ ಹೆಸರು ಹೇಳೋಕೆ ಆಗಲ್ಲ. ವೆಲ್ಕಮ್ ಮಾಡೋದು ಇರೋವರಿಗೆ. ಇಲ್ಲಿ ಯಾರೆಲ್ಲ ಇದ್ದಾರೆ ಅವರಿಗೆ ಮಾತ್ರ ವೆಲ್ಕಮ್ ಮಾಡೋದು. ಮನೆಯಲ್ಲಿ ಕೂತಿರುವವರಿಗೆಲ್ಲ ವೆಲ್ಕಮ್ ಮಾಡೋಕೆ ಆಗಲ್ಲ.. ಗೊತ್ತಾಯಿತಾ. ಈ ವಕೀಲರು ಸ್ವಲ್ಪ ಅರ್ಥ ಮಾಡಿಕೊಳ್ಳಬೇಕು ಇದೆಲ್ಲವನ್ನು’ ಎಂದು ಸಿದ್ದರಾಮಯ್ಯ ಹೇಳಿದರು.

‘ಅವರು ಪಾಪ (ವಕೀಲರು), ಡಿ.ಕೆ. ಶಿವಕುಮಾರ್ ಹೆಸರು ಹೇಳಿ ಎಂದು ಹೇಳುತ್ತಿದ್ದಾರೆ. ಅವರು ಬೆಂಗಳೂರಿಗೆ ಹೋಗ್ತೇನೆ ಎಂದು ಹೋದ್ರು. ಹೀಗಾಗಿ, ಅವರ ಹೆಸರು ನಾನು ಪ್ರಸ್ತಾಪ ಮಾಡಿಲ್ಲ’ ಎಂದೂ ಎದುರಿಗಿದ್ದವರನ್ನು ಉದ್ದೇಶಿಸಿ ಗಟ್ಟಿ ಧ್ವನಿಯಲ್ಲಿ ಮುಖ್ಯಮಂತ್ರಿ ಘೋಷಿಸಿದರು.

ಇದು ಸಿದ್ದರಾಮಯ್ಯನ ಶಕ್ತಿ ಪ್ರದರ್ಶನ ಅಲ್ಲ. ಅಭಿವೃದ್ಧಿಯ ಶಕ್ತಿಯನ್ನು ನಿಮ್ಮ ಮುಂದಿಟ್ಟಿದ್ದೇವೆ. ಬಿಜೆಪಿಯವರೇ, ನೀವು ಮೈಸೂರಿಗೆ ಏನು ಸಾಕ್ಷಿಗುಡ್ಡೆ ಬಿಟ್ಟು ಹೋಗಿದ್ದೀರಿ ಹೇಳಿ
ಸಿದ್ದರಾಮಯ್ಯ, ಮುಖ್ಯಮಂತ್ರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.