ಹೊಸಪೇಟೆ: ಮದ್ಯ ವರ್ಜನ ಶಿಬಿರದಿಂದ ಶಿಬಿರಾರ್ಥಿ, ಕೊಪ್ಪಳ ಜಿಲ್ಲೆ ಹುಲಿಗಿಯ ದೇವೇಂ ದ್ರಪ್ಪ (30) ಎಂಬು ವರು ತಪ್ಪಿಸಿಕೊಳ್ಳಲು ಹೋಗಿ ತಾಲ್ಲೂ ಕಿನ ಹಂಪಿಯ ಬಂಡೆಗಲ್ಲುಗಳ ಮಧ್ಯೆ ನಾಲ್ಕು ಗಂಟೆಗೂ ಹೆಚ್ಚು ಸಮಯ ಸಿಲುಕಿ ನರಳಾಡಿದ್ದಾರೆ.

ಹಂಪಿಯ ಕಡಲೆಕಾಳು ಗಣಪ ಸ್ಮಾರಕ ಹಿಂಭಾಗದ ಬೃಹತ್ ಬಂಡೆ ಗಲ್ಲುಗಳ ಬಳಿ ಘಟನೆ ಜರುಗಿದೆ. ಶಿವರಾಮ ಅವಧೂತರ ಮಠ ದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮದ್ಯವರ್ಜನ ಶಿಬಿರ ಆಯೋಜಿಸಲಾಗಿದೆ. ಒಂದು ವಾರದ ಶಿಬಿರ ಇದೇ 21ರಂದು ಆರಂಭವಾಗಿದೆ. ಶಿಬಿರದಲ್ಲಿ ಒಟ್ಟು 60 ಜನ ಪಾಲ್ಗೊಂಡಿದ್ದಾರೆ.

ಸೋಮವಾರ ಬೆಳಿಗ್ಗೆ ಆರು ಗಂಟೆಗೆ ಏಕಾಏಕಿ ಓಡಿ ಹೋಗುವಾಗ ದೇವೇಂ ದ್ರಪ್ಪ ಆಯಾ ತಪ್ಪಿ, ಬಂಡೆಗಲ್ಲುಗಳ ನಡುವೆ ಸಿಲುಕಿಕೊಂಡಿದ್ದಾರೆ. ಅವರು ಚೀರಾಡುವುದನ್ನು ಕೇಳಿ, ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ನಂತರ ಸ್ಥಳೀಯ ಪೊಲೀಸರು, ಗೃಹರಕ್ಷಕ ದಳ ಸಿಬ್ಬಂದಿ ಹಾಗೂ ಅಗ್ನಿ ಶಾಮಕ ಸಿಬ್ಬಂದಿ ಸತತ ನಾಲ್ಕು ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಏಣಿಗಳನ್ನು ಉಪಯೋಗಿಸಿ, ಅಗ್ನಿ ಶಾಮಕ ಸಿಬ್ಬಂದಿ ಮೇಲೆ ಹತ್ತಿದ್ದಾರೆ. ನಂತರ ದೇವೇಂದ್ರಪ್ಪನವರ ದೇಹಕ್ಕೆ ಹಗ್ಗ ಕಟ್ಟಿದ್ದಾರೆ. ಬಳಿಕ ಏಣಿಯ ಮೂಲ ಕ ಕೆಳಗಿಳಿಸಿದ್ದಾರೆ. ದೇವೇಂದ್ರಪ್ಪ ನಗ ರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ದೇವೇಂದ್ರಪ್ಪ ವಿಪರೀತ ಮದ್ಯ ಸೇವಿಸುತ್ತಿದ್ದರು. ಶಿಬಿರಕ್ಕೆ ಬಂದದ್ದರಿಂದ ಕುಡಿಯಲು ಆಗಿಲ್ಲ. ಅನೇಕ ವರ್ಷ ಗಳಿಂದ ಕುಡಿತದ ಅಭ್ಯಾಸ ಇದ್ದವರು ಈ ರೀತಿ ಓಡಿ ಹೋಗಲು ಪ್ರಯತ್ನಿಸುತ್ತಾರೆ’ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿನಿಧಿ ಮಂಜುನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.